ರಾಯಚೂರು: ರಾಜಕೀಯಕ್ಕೆ ಇಂಥವರೆ ಬರಬೇಕು, ಬರಬಾರದರು ಅಂತೇನಿಲ್ಲ, ರಾಜಕೀಯಕ್ಕೆ ಬಂದಂತಹ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಬಿಜೆಪಿಯಿಂದ (BJP) ಸಂತರಿಗೆ ಸಿಎಂ ಸ್ಥಾನಮಾನದ ಆಲೋಚನೆ ವಿಚಾರಕ್ಕೆ ಮಂತ್ರಾಲಯದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಂತ್ರಾಲಯ (Mantralayam) ಶ್ರೀಗಳು ಮುಖ್ಯವಾಗಿ ನಾನು ಮೊದಲಿನಿಂದಲೂ ಹೇಳೋದು, ಇಂಥ ವ್ಯಕ್ತಿ ಬರಬೇಕು, ಇಂಥವರೇ ಬರಬಾರದು ಎನ್ನುವುದಿಲ್ಲ. ರಾಜಕೀಯಕ್ಕೆ ಬಂದಂತ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವಂತ ವ್ಯಕ್ತಿ ಆಗಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ, ಅವರಿಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಲ್ಲ : ಪ್ರಭು ಚವ್ಹಾಣ್ ಟಾಂಗ್
Advertisement
Advertisement
ಧರ್ಮದಲ್ಲಿ ರಾಜಕೀಯ ಬರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮವಿದ್ದರೆ ಅದು ಉತ್ತಮವಾದ ಗುಣಮಟ್ಟದ ಆಡಳಿತ, ವ್ಯವಸ್ಥೆಯಾಗಿ ಕಾಣುತ್ತದೆ ಅಂತ ಭಾವಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸ್ಕೂಟರ್‌ಗೆ ಡಿಕ್ಕಿ ಹೊಡೆದು 6ರ ಬಾಲಕನನ್ನು 2 ಕಿ.ಮೀ ಎಳೆದೊಯ್ದ ಟ್ರಕ್