ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಾನ ಮಂತ್ರಾಲಯ ರಾಯರ ಮಠದಲ್ಲಿ ಕಾರ್ತಿಕ ಮಾಸದ ಆಚರಣೆ ಸಂಭ್ರಮ ಜೋರಾಗಿದೆ. ಕಾರ್ತಿಕ ಚತುರ್ದಶಿ ಹಿನ್ನೆಲೆ ಧಾತ್ರಿ ಹವನ ನಡೆಸಲಾಯಿತು.
Advertisement
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ವಿಶೇಷ ಪೂಜೆ ನೆರವೇರಿಸಿದರು. ಮಠದ ಹೊರವಲಯದಲ್ಲಿರುವ ಅಭಯ ಆಂಜನೇಯ ಸನ್ನಿದಾನದಲ್ಲಿ ಮೂಲ ರಾಮದೇವರ ಪೂಜೆ ನೆರವೇರಿಸಲಾಯಿತು. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ
Advertisement
Advertisement
ಕಾರ್ತಿಕ ಮಾಸ ಹಿನ್ನೆಲೆ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಭಕ್ತರಿಗಾಗಿ ಮಠದ ಆಡಳಿತ ಮಂಡಳಿ ಅಭಯ ಆಂಜನೇಯ ಸನ್ನಿದಾನದಲ್ಲಿ ವನಭೋಜನ ಏರ್ಪಡಿಸಿತ್ತು. ಇನ್ನೂ ನವೆಂಬರ್ 19 ರಂದು ತುಂಗಭದ್ರಾ ನದಿ ತೀರದಲ್ಲಿ ತುಂಗಾರತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಜೆ ವೇಳೆ ನಡೆಯುವ ಕಾರ್ಯಕ್ರಮಕ್ಕಾಗಿ ಮಠ ಅಗತ್ಯ ಸಿದ್ದತೆಗಳನ್ನ ನಡೆಸಿದೆ. ಇದನ್ನೂ ಓದಿ: ವೀರ್ ದಾಸ್‍ಗೆ ರಾಜ್ಯದಲ್ಲಿ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ
Advertisement