ರಾಯಚೂರು: ಮಂತ್ರಾಲಯ ಮಠಕ್ಕೆ ಸಾಬ್ರು ಜಾಗ ಕೊಟ್ಟಿದ್ದು, ಬೇಡ ಅಂದ್ರೆ ಆ ಜಾಗ ಕೊಟ್ಟು ಹೋಗಿ ಅನ್ನೋ ಸಿಎಂ ಇಬ್ರಾಹಿಂ ಹೇಳಿಕೆಗೆ ಮಂತ್ರಾಲಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಮಂತ್ರಾಲಯ ನಮ್ಮ ಮಠಕ್ಕೆ ತುಂಬಾ ಪೂರ್ವದಲ್ಲೇ ಬಂದಿರುವ ಜಾಗ. ನವಾಬ ಸಿದ್ದಿ ಮಸೂದ್ ಖಾನ್ ಪುನಃ ಮಠಕ್ಕೆ ಮಂತ್ರಾಲಯವನ್ನು ನೀಡಿದ್ದಾರೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ಇವಿಎಂ ತಿರುಚಬಹುದು ಅನ್ಸುತ್ತೆ: ವಿಧಾನಸಭೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ
Advertisement
Advertisement
ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು ರಾಯರಿಗಿಂತಲೂ ಪೂರ್ವದಿಂದಲೇ ಮಂತ್ರಾಲಯ ನಮ್ಮ ಮಠಕ್ಕೆ ಸೇರಿದ್ದಾಗಿದೆ. ಈ ವಿಚಾರದಲ್ಲಿ ಯಾರೂ ಶಾಂತಿ ಸೌಹಾರ್ದತೆ ಕದಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಮ್ಮಪ್ಪನ ಬಿಟ್ಟು ಯಾರಿಗೂ ನಾನು ಅಪ್ಪಾಜಿ ಎಂದಿಲ್ಲ: ಯತ್ನಾಳ್
Advertisement
ಭಾರತೀಯರೆಲ್ಲರೂ ಸೌಹಾರ್ದಯುತವಾಗಿ ಬಾಳಬೇಕು. ಇಲ್ಲಸಲ್ಲದ ಗಲಭೆ ಮಾಡಿ ಶಾಂತಿಯನ್ನು ಕೆಡಿಸಬಾರದು ಎನ್ನುವ ನಿಟ್ಟಿನಲ್ಲಿ ಸಿಎಂ ಇಬ್ರಾಹಿಂ ಆ ಮಾತನ್ನು ಆಡಿದ್ದಾರೆ. ಸಿಎಂ ಇಬ್ರಾಹಿಂ ರಾಯರ ಪರಮ ಭಕ್ತರು. ರಾಯರ ಬಗ್ಗೆ ಗೌರವ ಭಕ್ತಿ ಎಲ್ಲವೂ ಅವರಿಗೆ ಇದೆ. ಅವರ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಬಾರದು. ಹಿಂದೂ, ಮುಸ್ಲಿಂ ಶಾಂತಿ ಸೌಹಾರ್ದತೆಯನ್ನು ಯಾರೂ ಕದಡಬಾರದು ಎಂದು ಮಂತ್ರಾಲಯ ಶ್ರೀಗಳು ಹೇಳಿದ್ದಾರೆ.