ಕೊರೊನಾ ಭೀತಿ – ಮಂತ್ರಾಲಯ, ಆದಿಚುಂಚನಗಿರಿ, ನಂಜನಗೂಡು ಬಂದ್

Public TV
2 Min Read
temples close

ರಾಯಚೂರು/ಮೈಸೂರು/ಬೆಂಗಳೂರು: ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯ, ಆದಿಚುಂಚನಗಿರಿ ಹಾಗೂ ನಂಜನಗೂಡು ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಮಂತ್ರಾಲಯದಲ್ಲಿ ಭಕ್ತರ ದರ್ಶನ ಬಂದ್ ಆಗಿದೆ. ಈ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ರಾಯರ ದರ್ಶನ ಬಂದ್ ಆಗಿತ್ತು. 11 ವರ್ಷಗಳ ಬಳಿಕ ಮತ್ತೆ ಇಂದಿನಿಂದ ರಾಯರ ದರ್ಶನ ಭಕ್ತರಿಗೆ ಲಭ್ಯವಿಲ್ಲ. ಕೊರೊನಾ ಭೀತಿ ಮುಗಿಯುವರೆಗೂ ಮಂತ್ರಾಲಯಕ್ಕೆ ಬರಬೇಡಿ ಎಂದು ಶ್ರೀಮಠದ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ. ಇಂದು ಗುರುವಾರ ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಭಾರೀ ನಿರಾಸೆಯಾಗಿದ್ದು, ಶ್ರೀಮಠದ ಒಳಗಡೆ ರಾಯರಿಗೆ ಎಂದಿನಂತೆ ಪೂಜೆ-ಪುರಸ್ಕಾರ ನಡೆಯಲಿವೆ. ಆದರೆ ಭಕ್ತರಿಗೆ ಮಾತ್ರ ದರ್ಶನ ರದ್ದು ಮಾಡಿ ಎಂದು ಶ್ರೀಮಠ ಸೂಚನೆ ನೀಡಿದೆ.

temples close 1

ಇನ್ನೂ ಮಾಧ್ಯಮ ಪ್ರಕಟಣೆಯಲ್ಲಿ ಆದಿಚುಂಚನಗಿರಿ ಮಠ ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾದ್ಯಂತ ಹರಡಿರುವ ಕೊರೊನಾ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸದಂತೆ ಆದಿಚುಂಚನಗಿರಿ ಸಂಸ್ಥಾನ ಮಠದ ಜಗದ್ಗುರುಗಳು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಭಕ್ತಾದಿಗಳಲ್ಲಿ ತಿಳಿಸಿದ್ದಾರೆ. ಇದಕ್ಕೆ ತಾವುಗಳು ಸಹಕರಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

temples close 3 e1584590732478

ಇತ್ತ ಕೊರೊನಾ ಎಫೆಕ್ಟ್ ನಿಂದಾಗಿ ಇಂದಿನಿಂದ ನಂಜನಗೂಡಿನ ಶ್ರೀ ನಂಜುಡೇಶ್ವರನ ದರ್ಶನ ಭಕ್ತರಿಗೆ ಇಲ್ಲ. ಕೊರೊನಾದಿಂದಾಗಿ ನಂಜನಗೂಡು ದೇವಾಲಯವನ್ನು ಬಂದ್ ಆಗಿದೆ. ದೇವಾಲಯಕ್ಕೆ ಇಂದಿನಿಂದ ಭಕ್ತಾದಿಗಳ ಪ್ರವೇಶ ನಿಷೇಧವಿದ್ದು ದೇವಾಲಯದ ಮುಂಬಾಗಿಲು ಮುಚ್ಚಲಾಗಿದೆ. ಮಾರ್ಚ್ 31ರವರೆಗೆ ದೇವಾಲಯ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶ ಇಲ್ಲ ಎಂದು ನೋಟಿಸ್ ಆಂಟಿಸಲಾಗಿದೆ. ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆದಿವೆ.

temples close 2

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ತರಬೇತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಿನೇ ದಿನೇ ಕಿಲ್ಲರ್ ಕೊರೊನಾ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ರಜೆ ಘೋಷಣೆ ಮಾಡಿದೆ. ಕೊರೋನಾದಿಂದ ಆಗುವ ಅನಾಹುತಗಳನ್ನ ತಪ್ಪಿಸಲು ತರಬೇತಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದೇ ತಿಂಗಳ 31ರ ತನಕ ಪೊಲೀಸ್ ತರಬೇತಿ ಶಾಲೆಗೆ ರಜೆ ಘೋಷಣೆ ಮಾಡಿ ತರಬೇತಿ ವಿಭಾಗದ ಐಜಿಪಿ ಬುಧವಾರ ಆದೇಶ ಹೊರಡಿಸಿದ್ದಾರೆ. ಪೊಲೀಸ್ ತರಬೇತಿ ಶಾಲೆಗಳಲ್ಲಿ ಪೇದೆಗಳು, ಸಬ್‍ಇನ್ಸಪೆಕ್ಟರ್ ಅಭ್ಯರ್ಥಿಗಳು ಶಿಕ್ಷಣ ನೀಡುತ್ತಾರೆ.

Share This Article