ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 5.46 ಕೋಟಿ ರೂ. ಕಾಣಿಕೆ ಸಂಗ್ರಹ

Public TV
1 Min Read
Raichur Mantralaya

ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದೆ. ಮಠದಲ್ಲಿ ಮೊದಲ ಬಾರಿಗೆ 5.46 ಕೋಟಿ ರೂ. ದಾಖಲೆಯ ಕಾಣಿಕೆ ಸಂಗ್ರಹಗೊಂಡಿದೆ.

Raichur Mantralaya 1 ಕಳೆದ 35 ದಿನಗಳಲ್ಲಿ ಒಟ್ಟು 5,46,06,555 ರೂ. ಕಾಣಿಕೆ ಸಂಗ್ರಹವಾಗಿತ್ತು. ಒಟ್ಟು ಕಾಣಿಕೆಯಲ್ಲಿ 5,30,92,555 ರೂ. ನೋಟುಗಳು. 15,14,000 ರೂ. ನಾಣ್ಯಗಳಿವೆ. 127 ಗ್ರಾಂ ಚಿನ್ನ, 1820 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರಕ್ಕೆ ಜಾಗತಿಕ ಬೆಂಬಲ ಸಿಕ್ತು, ಆದ್ರೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ: ಮೋದಿ ಬೇಸರ

ಜೂನ್ ತಿಂಗಳಲ್ಲಿ ಒಟ್ಟು 5 ಕೋಟಿ 28 ಲಕ್ಷ 39,538 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕರ ಸೇವಕರು, ಮಠದ ಭಕ್ತರು, ಮಠದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿರುವುದಾಗಿ ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.

Share This Article