ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 22 ದಿನದಲ್ಲಿ 3.46 ಕೋಟಿ ಸಂಗ್ರಹ

1 Min Read

ರಾಯಚೂರು: ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿ (Shri Raghavendra Swamy) ಮಠದ ಅಕ್ಟೋಬರ್ ತಿಂಗಳಿನ 22 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾ 22 ದಿನದಲ್ಲಿ 3,46,53,864 ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತೀ ತಿಂಗಳಿನಂತೆ ಈ ಬಾರಿಯೂ ಭಕ್ತರ ದಂಡು ಮಠಕ್ಕೆ ಹರಿದು ಬಂದಿದ್ದು, ಭಾರೀ ಪ್ರಮಾಣದ ಕಾಣಿಕೆ ಸಂಗ್ರವಾಗಿದೆ.

ಗುರುರಾಘವೇ<ದ್ರ ಸ್ವಾಮಿ ಮಠಕ್ಕೆ 22 ದಿನಗಳಲ್ಲೇ 3 ಕೋಟಿ 46 ಲಕ್ಷ 53,864 ರೂ. ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,36,41,364 ರೂ. ಕರೆನ್ಸಿ ನೋಟುಗಳು. 10,12,500 ರೂ. ನಾಣ್ಯಗಳು ಸಂಗ್ರಹವಾಗಿವೆ. 42 ಗ್ರಾಂ ಚಿನ್ನ, 645 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರಿ ಮಳೆ – ಕೊಡೈಕೆನಾಲ್ ಘಾಟ್‌ನ ಮೂರು ಕಡೆ ಭೂಕುಸಿತ, ಸಂಚಾರಕ್ಕೆ ಅಡಚಣೆ

ಮಂತ್ರಾಲಯ ರಾಯರ ಮಠದಲ್ಲಿ ಅತೀ ಭದ್ರತೆಯಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು.

Share This Article
Exit mobile version