ರಾಯಚೂರು: ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗು ಹಾಗೂ ಕೇರಳಕ್ಕೆ ತಲಾ 15 ಲಕ್ಷ ರೂ. ಪರಿಹಾರವನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ನೀಡುವುದಾಗಿ ತಿಳಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಅವರು, ಕೊಡಗು ಜನರ ಪರಿಹಾರ ಕಾರ್ಯಕೈಗೊಳ್ಳಲು ನೆರವು ನೀಡುವ ದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ 15 ಲಕ್ಷ ರೂ. ಚೆಕ್ ನೀಡಲಾಗುವುದು. ಅಲ್ಲದೇ ಈಗಾಗಲೇ ಕೊಡಗು ನೆರೆ ಪೀಡಿತ ಜನರ ಸಹಾಯಕ್ಕಾಗಿ ಮಂತ್ರಾಲಯ ಬೆಂಗಳೂರು ಸೇರಿ ಇತರ ಮಠದಿಂದ ಸ್ವಯಃ ಸೇವರಕನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಕೊಡಗು ಪ್ರವಾಹದಿಂದ ಉಂಟಾಗಿರುವ ನಷ್ಟದ ಕುರಿತು ಅಧ್ಯಯನ ನಂತರ ಮಾಹಿತಿ ಸಂಗ್ರಹಿಸಿ ಸಹಾಯ ಕಾರ್ಯ ನೀಡುವ ಅಶ್ವಾಸನೆ ನೀಡಿದ ಅವರು, ಆಹಾರ, ಔಷಧಿ, ನೀರು ಇತರೆ ಸಿದ್ಧ ವಸ್ತುಗಳನ್ನು ಈಗಾಗಲೇ ಪೂರೈಕೆ ಮಾಡಲಾಗಿದೆ. ಅಲ್ಲದೇ ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯಗಳನ್ನ ಕಲ್ಪಿಸಲಾಗುವುದು ಎಂದು ಸುಬುಧೇಂದ್ರ ತೀರ್ಥ ಸ್ವಾಮಿ ತಿಳಿಸಿದರು. ಇದನ್ನೂ ಓದಿ: ಕೇರಳ, ಕೊಡಗು ಜಲಪ್ರಳಯ: ಕೊಲ್ಲೂರು ದೇವಸ್ಥಾನದಿಂದ 1.25 ಕೋಟಿ ರೂ. ಪರಿಹಾರ ಘೋಷಣೆ
Advertisement
ಇದೇ ಆಗಸ್ಟ್ 25 ರಿಂದ ಆರಂಭವಾಗುವ ರಾಯರ ಆರಾಧನೆಯಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಕ್ರಮಕೈಗೊಂಡಿದ್ದು, ಪ್ರವಾಹ ಸಂತ್ರಸ್ತರಿಗೆ ಸಂಪೂರ್ಣ ನೆರವು ನೀಡಲಾಗವುದು ಎಂದು ತಿಳಿಸಿದರು. ಇದನ್ನೂ ಓದಿ: ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv