ಬೆಂಗಳೂರು: ನಾಳೆಯಿಂದ ಮಳೆಗಾಳದ ಅಧಿವೇಶನ (Monsoon session) ಆರಂಭವಾಗಲಿದ್ದು, ಆರಂಭದಿಂದಲೇ ಕಲಾಪ ಕಾವೇರುವ ಸಾಧ್ಯತೆ ಇದೆ. ಸಿದ್ದರಾಮಯ್ಯ (Siddaramaiah) ವಿರುದ್ಧ ಹಳೇ ಕೇಸ್ ಮೂಲಕ ಬಿಜೆಪಿ (BJP) ಸರ್ಕಾರ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ.
2015ರಲ್ಲಿ ಅರ್ಕಾವತಿ ಬಡಾವಣೆಯ 541 ಎಕರೆ ರೀಡು ಡಿನೋಟಿಫೈ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಿನ ಕಾಂಗ್ರೆಸ್ (Congress) ಸರ್ಕಾರವೇ ನ್ಯಾ.ಕೆಂಪಣ್ಣ ಆಯೋಗ ರಚಿಸಿತ್ತು. ಈ ಆಯೋಗ 2017ರ ಆಗಸ್ಟ್ 23ರಂದು ಸರ್ಕಾರಕ್ಕೆ 4 ಸಂಪುಟಗಳಲ್ಲಿ ಸುಮಾರು 9 ಸಾವಿರ ಪುಟಗಳ ಅಂತಿಮ ವರದಿ ಸಲ್ಲಿಸಿದೆ. ಆದರೆ 5 ವರ್ಷವಾದ್ರೂ ಶಾಸನ ಸಭೆಯಲ್ಲಿ ಇಲ್ಲಿ ತನಕ ನ್ಯಾ.ಕೆಂಪಣ್ಣ ಆಯೋಗದ ವರದಿ ಮಂಡನೆ ಆಗಿಲ್ಲ.
Advertisement
Advertisement
ಈಗ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ವರದಿ ಮಂಡನೆಗೆ ಹೈಕಮಾಂಡ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ನಿನ್ನೆಯ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿ.ಟಿ.ರವಿ (C.T Ravi)ರೀಡು ಬಗ್ಗೆ ನೇರವಾಗಿ ಪ್ರಸ್ತಾಪ ಮಾಡಿದ್ರು. ಈ ಪ್ರಸ್ತಾಪದ ಬೆನ್ನಲ್ಲೇ ಸಿಎಂ ಬೊಮ್ಮಾಯಿ (Basavaraj Bommai) ವರದಿ ಮಂಡನೆಗೆ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು
Advertisement
Advertisement
ಈ ಅಧಿವೇಶನ ಬಿಜೆಪಿ ವರ್ಸಸ್ ಕಾಂಗ್ರೆಸ್ ಫೈಟ್‍ಗೆ ವೇದಿಕೆ ಆಗೋದು ಖಚಿತವಾದಂತಿದೆ. ಈಗಾಗಲೇ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ (Corruption) ದ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಸಿದ್ಧವಾಗಿದ್ದು, ಸರ್ಕಾರವನ್ನ ಕಟ್ಟಿ ಹಾಕಲು ಕೈ ಪಡೆ ತಯಾರಿ ಮಾಡಿಕೊಂಡಿದೆ. ಇಷ್ಟಲ್ಲದೇ ಅಧಿವೇಶನದಿಂದಲೇ 2023ರ ಚುನಾವಣೆಗೆ ರಣಕಹಳೆ ಊದಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಂತಿದೆ. ಆದರೆ ಕಾಂಗ್ರೆಸ್ ಅಸ್ತ್ರಕ್ಕೆ ಬಿಜೆಪಿಯಿಂದಲೂ ಪ್ರತ್ತಾಸ್ತ್ರ ರೆಡಿ ಆಗ್ತಿದೆ. ಕಾಂಗ್ರೆಸ್ ಸರ್ಕಾರದ ಹಗರಣಗಳನ್ನ ಇಟ್ಕೊಂಡು ತಿರುಗೇಟು ಕೊಡೋಕೆ ಸರ್ಕಾರ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಕಾಂಗ್ರೆಸ್ ಹಗರಣಗಳ ಪಟ್ಟಿಗಳನ್ನ ಬೊಮ್ಮಾಯಿ ಸರ್ಕಾರ ಸಿದ್ಧ ಮಾಡಿಕೊಂಡಿದೆ.
ಸರ್ಕಾರದ ವಿರುದ್ದ ಕಾಂಗ್ರೆಸ್ ಅಸ್ತ್ರವೇನು!?: 40% ಕಮಿಷನ್ ಆರೋಪ, ನ್ಯಾಯಾಂಗ ತನಿಖೆಗೆ ಒತ್ತಾಯಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಲೋಕೋಪಯೋಗಿ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳಲ್ಲಿ 40% ಭ್ರಷ್ಟಾಚಾರ ಆರೋಪ ಪ್ರಸ್ತಾಪ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ, ಮಹನೀಯರು ಪಠ್ಯಕ್ಕೆ ಕೊಕ್ ಕೊಟ್ಟಿರೋ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ. ಬೆಂಗಳೂರು ಮಳೆ ಅನಾಹುತ ವಿಚಾರದಲ್ಲಿ ವಾಗ್ದಾಳಿ ನಡೆಸಲು ಸಿದ್ಧತೆ ನಡೆಯುತ್ತಿದೆ.
ಬೆಂಗಳೂರಿನ ನಿರ್ವಾಹಣೆ ಬಿಜೆಪಿ ಕಾಲದಲ್ಲಿ ಸರಿಯಾಗಿ ಆಗಿಲ್ಲ. ಇವತ್ತಿನ ಪರಿಸ್ಥಿತಿಗೆ ಬಿಜೆಪಿ ಕಾರಣ ಅಂತ ಸದನದಲ್ಲಿ ತರಾಟೆಗೆ ಹಾಗೂ ಪಿಎಸ್‍ಐ ನೇಮಕಾತಿ ಹಗರಣ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ
ಕಾಂಗ್ರೆಸ್ ಅಸ್ತ್ರಕ್ಕೆ ಸರ್ಕಾರದ ಪ್ರತ್ಯಾಸ್ತ್ರ: ಸಿದ್ದರಾಮಯ್ಯ ಅವಧಿಯಲ್ಲಿ ಆಗಿರೋ ರೀ ಡೂ ಹಗರಣ ಪ್ರಸ್ತಾಪಕ್ಕೆ ಸಿದ್ಧತೆ ನಡೆಯುತ್ತಿದೆ. ಕೆಂಪಣ್ಣ ಆಯೋಗದ ವರದಿ ಸದನದಲ್ಲಿ ಮಂಡಿಸಿ ತನಿಖೆಗೆ ಒಪ್ಪಿಸುವ ಬಗ್ಗೆ ಚರ್ಚೆ, ಕಾಂಗ್ರೆಸ್ ಸರ್ಕಾರದ ಸೋಲಾರ್ ಹಗರಣ (Solar Scam) ಪ್ರಸ್ತಾಪಕ್ಕೂ ಸಿದ್ಧತೆ ನಡೆದಿದೆ. ಕೇವಲ 7 ಸೆಕೆಂಡ್‍ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿದ ಸೋಲಾರ್ ಹಗರಣ, ಕಾಂಗ್ರೆಸ್ ಅವಧಿಯ ವಿದ್ಯುತ್ ಖರೀದಿಯಲ್ಲಿ ಆಗಿರೋ ಅಕ್ರಮ, ಸಿದ್ದರಾಮಯ್ಯ ಕಾಲದಲ್ಲಿ ಇಂಧನ ಇಲಾಖೆಯಲ್ಲಿನ ವಿದ್ಯುತ್ ಹಗರಣ ಹಾಗೂ 2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಅಕ್ರಮದ ಹಗರಣ ಪ್ರಸ್ತಾಪ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಸಿದ್ದು ಕಾಲದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಸಿಐಡಿ (CID) ತನಿಖೆಗೆ ಒತ್ತಾಯಿಸುವ ಸಾಧ್ಯತೆಗಳಿವೆ.