ಖ್ಯಾತ ನಟ ಮನ್ಸೂರ್ ಅಲಿಖಾನ್ ನಟಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ದೊಡ್ಡ ಸುದ್ದಿ ಆಗಿತ್ತು. ನಟಿ ತ್ರಿಷಾ ಕುರಿತಂತೆ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ಈ ಪ್ರಕರಣದ ಕುರಿತಂತೆ ವಿವರಣೆ ಕೇಳಿ ನಟಿ ತ್ರಿಷಾ ಪೊಲೀಸರು (Police) ಪತ್ರ ಬರೆದಿದ್ದಾರೆ. ಘಟನೆ ಕುರಿತಂತೆ ವಿವರಣೆ ಕೇಳಿದ್ದಾರೆ.
Advertisement
ಕ್ಷಮೆ ಕೇಳಿದ್ದಾರೆ ಮನ್ಸೂರ್
Advertisement
ತ್ರಿಷಾಗೆ ಮಾನಹಾನಿ ಆಗುವಂತಹ ಹೇಳಿಕೆ ನೀಡಿದ್ದ ಹಿರಿಯ ನಟ ಮನ್ಸೂರ್ ಅಲಿ ಖಾನ್ ಈಗಾಗಲೇ ಕ್ಷಮೆ ಕೇಳಿದ್ದಾರೆ. ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಏರುತ್ತಿದ್ದಂತಯೆ ಎಚ್ಚೆತ್ತುಕೊಂಡ ಮನ್ಸೂರ್, ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದರು. ನಿಮ್ಮ ವಿವಾಹದ ದಿನದಂದು ಮಾಂಗಲ್ಯವನ್ನು ಮುಟ್ಟಿ ಆಶೀರ್ವದಿಸುವಂತಹ ಅವಕಾಶ ನನಗೆ ಬರಲಿ ಎಂದು ಅವರು ಹೇಳಿದ್ದರು.
Advertisement
Advertisement
ಮನ್ಸೂರ್ ಅಲಿ ಖಾನ್ ಮೇಲೆ ಈ ಪ್ರಕರಣದ ಕುರಿತಂತೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ.
ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿದೆ ಎಂದು ವರದಿ ಆಗಿತ್ತು.
ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.