ಕೊಲ್ಕತ್ತಾ: ಬಿರಿಯಾನಿಗೆ (Biriyani) ಬಳಸುವ ಮಸಾಲೆ ಪದಾರ್ಥಗಳಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಬಿರಿಯಾನಿ ಅಂಗಡಿಗಳನ್ನು ಮುಚ್ಚಬೇಕು ಎಂದು ಟಿಎಂಸಿ ನಾಯಕ ನಾಯಕ ರವೀಂದ್ರ ನಾಥ್ ಘೋಷ್ (Rabindra Nath Ghosh) ಒತ್ತಾಯಿಸಿದ್ದಾರೆ.
ಬಂಗಾಳದ ಕೂಚ್ ಬೆಹಾರ್‌ನಲ್ಲಿರುವ ಎರಡು ಸ್ಥಳೀಯ ಬಿರಿಯಾನಿ ಅಂಗಡಿಗಳನ್ನೂ (Biriyani Stores) ಮುಚ್ಚುವಂತೆ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಸರ್ಕಾರದ ಮಾಜಿ ಸಚಿವ ರವೀಂದ್ರ ನಾಥ್ ಘೋಷ್ ಪ್ರಕಾರ, ಬಿರಿಯಾನಿ ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಮಸಾಲೆಗಳು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತಿವೆ ಎಂದು ಜನರಿಂದ ಆರೋಪಗಳು ಕೇಳಿ ಬಂದಿವೆ. ಪುರುಷನ ಲೈಂಗಿಕ ಉತ್ಸಾಹ (Sexual Interest) ತಡೆಯಲು ಯಾವ ಮಸಾಲೆಗಳನ್ನು ಬಳಸಲಾಗುತ್ತಿದೆ ಎಂದು ತಿಳಿದಿಲ್ಲ. ಆದರೆ ಜನರಿಂದ ಬರುವ ದೂರುಗಳ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ
ಬಿಹಾರ ಮತ್ತು ಉತ್ತರ ಪ್ರದೇಶದಂತಹ (UttarPradesh) ರಾಜ್ಯಗಳ ಜನರು ನಮ್ಮ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ ಮತ್ತು ಪರವಾನಗಿ ಇಲ್ಲದೇ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ದೂರುಗಳ ನಂತರ ಪರಿಶೀಲಿಸಿದಾಗ ಅಂಗಡಿಗಳಿಗೆ ಟ್ರೇಡ್ ಲೈಸೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಹೀಗಾಗಿ ಅಂಗಡಿಗಳನ್ನು ಮುಚ್ಚಲು ಆಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ.