ಜೈಪುರ: 35 ರೂಪಾಯಿಗಳನ್ನು ಮರಳಿಪಡೆಯುವ ಸಲುವಾಗಿ ರಾಜಾಸ್ಥಾನದ ಕೋಟಾ ಮೂಲದ ವ್ಯಕ್ತಿಯೊಬ್ಬರು ಕಳೆದ 5 ವರ್ಷಗಳಿಂದ ನಡೆಸಿದ ಕಾನೂನು ಹೋರಾಟ ಕೊನೆಗೂ ಯಶಸ್ವಿಯಾಗಿದ್ದು, ಸುಮಾರು 3 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ.
2.98 ಬಳಕೆದಾರರಿಗೆ ಪ್ರತಿ ಟಿಕೆಟ್ ಬೆಲೆ 35 ರೂಪಾಯಿಯಂತೆ ಒಟ್ಟಾರೆ 2.43 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಹಿಂಪಡೆಯಲಿದ್ದಾರೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ. ಇದನ್ನೂ ಓದಿ: ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್
Advertisement
Advertisement
ಸುಮಾರು 50 ಆರ್‌ಟಿಐ ಅರ್ಜಿ ಮತ್ತು 4 ಸರ್ಕಾರಿ ಇಲಾಖೆಗೆ ಹಲವು ಪತ್ರ ಬರೆದು ಜಿಎಸ್‌ಟಿ ಅನುಷ್ಟಾನವಾಗುವುದಕ್ಕೂ ಮುನ್ನ ತನ್ನ ಟಿಕೆಟ್ ರದ್ದಾಗಿದ್ದರೂ ಸೇವಾ ಶುಲ್ಕವಾಗಿ ಪಡೆದಿದ್ದ 35 ರೂಪಾಯಿಯನ್ನು ಹೋರಾಟದೊಂದಿಗೆ ಮತ್ತೆ ಪಡೆದುಕೊಂಡಿದ್ದಾರೆ. ಇದರಿಂದ ಇದೇ ಪರಿಸ್ಥಿತಿಯಲ್ಲಿದ್ದ 2.98 ಲಕ್ಷ ಐಆರ್ ಸಿಟಿಸಿ ಬಳಕೆದಾರರಿಗೆ ರೈಲ್ವೆಯು 2.43 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ ಉತ್ತರಿಸಿದ್ದಾರೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಿಎಸ್‌ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವರಿಗೆ ಪದೇ ಪದೇ ಮಾಡಿದ ಟ್ವೀಟ್ ಗಳಿಂದ 2.98 ಲಕ್ಷ ಬಳಕೆದಾರರು ರೂ.35 ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
ಏನಿದು ಘಟನೆ?: ಜಿಎಸ್‌ಟಿ ಅನುಷ್ಠಾನವಾಗುವ ಮುನ್ನವೇ ತಾನು ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ಶುಲ್ಕವಾಗಿ 35 ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗಿತ್ತು. ನಂತರ ರೈಲ್ವೆ ಮತ್ತು ಹಣಕಾಸು ಸಚಿವಾಲಯಕ್ಕೆ ಆರ್‌ಟಿಐ ಸಲ್ಲಿಸುವ ಮೂಲಕ 35 ರೂಪಾಯಿ ವಾಪಸ್ ಪಡೆದುಕೊಳ್ಳಲು ಹೋರಾಟ ಆರಂಭಿಸಿದ್ದರು. ಇದೀಗ ಹೆಚ್ಚುವರಿಯಾಗಿ ಪಡೆಯಲಾಗಿದ್ದ 35 ರೂಪಾಯಿ ತನಗೆ ವಾಪಸ್ ಬಂದಿರುವುದು ಸಂತೋಷವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.