CinemaDistrictsKarnatakaLatestMain PostSandalwood

ರವಿಮಾಮನ ಹಾದಿಯಲ್ಲೇ ಕ್ರೇಜಿಸ್ಟಾರ್ ಪುತ್ರ ಮನೋರಂಜನ್

ಸಿನಿಮಾ ರಂಗದಲ್ಲಿ ಪ್ರೀತಿ ಪ್ರೇಮಕ್ಕೆ ಹೊಸ ವ್ಯಾಖ್ಯಾನ ಬರೆದವರು ಕ್ರೇಜಿಸ್ಟಾರ್ ರವಿಚಂದ್ರನ್. ಅವರ ಬಹುತೇಕ ಚಿತ್ರಗಳು ಕಲರ್ ಫುಲ್. ದೃಶ್ಯಗಳಂತೂ ಶೃಂಗಾರರಸದಲ್ಲೇ ಲೇಪನಗೊಂಡಂತೆ ಇರುತ್ತಿದ್ದವು. ಮಲ್ಲ, ಹಳ್ಳಿಮೇಷ್ಟ್ರು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕಿಯ ಜೊತೆಗೆ ರವಿಚಂದ್ರನ್ ಅವರು ಡುಯೆಟ್ ಹಾಡುವುದನ್ನೇ ನೋಡಲು ಜನರು ಥಿಯೇಟರ್ ಗೆ ಬರುತ್ತಿದ್ದರು. ಸದ್ಯ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಕೂಡ ಸಿನಿಮಾವೊಂದರಲ್ಲಿ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

ಮನು ಕಲ್ಯಾಡಿ ನಿರ್ದೇಶನದಲ್ಲಿ ತಯಾರಾಗಿರುವ ಪ್ರಾರಂಭ ಸಿನಿಮಾದಲ್ಲಿ ನಾಯಕಿ ಕೀರ್ತಿ ಕಲ್ಕೇರಿ ಜತೆ ಲಿಪ್ ಲಾಕ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಈ ಸಿನಿಮಾದಲ್ಲಿಯ ಹಾಡುಗಳಲ್ಲೂ ಮನೋರಂಜನ್ ಸಖತ್ ಮೈಚಳಿ ಬಿಟ್ಟು ಕುಣಿದಿದ್ದಾರಂತೆ. ಹಾಗಾಗಿ ಅಪ್ಪನ ಹಾದಿಯಲ್ಲೇ ಮಗ ಸಾಗುತ್ತಿದ್ದಾನೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

ಮನೋರಂಜನ್ ನಟನೆಯ ಈ ಹಿಂದಿನ ಸಿನಿಮಾ ಮುಗಿಲ್ ಪೇಟೆಯಲ್ಲಿ ತಮ್ಮ ತಂದೆಯವರ ಸಿನಿಮಾಗಳನ್ನು ಅವರು ನೆನಪಿಸಿದ್ದರು. ಈ ಸಿನಿಮಾದಲ್ಲಿ ಅದು ರಿಪೀಟ್ ಆಗಲಿದೆಯಂತೆ. ಪ್ರಾರಂಭದಲ್ಲಿ ಮನೋರಂಜನ್ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ರಗಡ್ ಲುಕ್ ಕೂಡ ಇದೆಯಂತೆ.

Leave a Reply

Your email address will not be published.

Back to top button