ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚೆಗಷ್ಟೆ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು, ಮನೆಗೆ ಹೊಸ ಅತಿಥಿಯಾಗಿ ಅಳಿಯನನ್ನು ಆಗಮಿಸಿಕೊಂಡಿದ್ದಾರೆ. ಇದೀಗ ರವಿಚಂದ್ರನ್ ಮನೆಗೆ ಮತ್ತೊಬ್ಬ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ.
ರವಿಚಂದ್ರನ್ ಅವರ ಮಗ ಮನೋರಂಜನ್ ಅವರು ತಾವು ಕನಸು ಕಂಡಿದ್ದ ದುಬಾರಿ ಡುಕಾಟಿ 969 ಬೈಕನ್ನು ಮಂಗಳವಾರ ಖರೀದಿಸಿದ್ದಾರೆ. ಬೈಕ್ ಖರೀಸಿದ ಸಂತಸವನ್ನು ಮನೋರಂಜನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆ ತಮ್ಮ ಬೈಕ್ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.
Advertisement
Advertisement
“ನಾನು ಶಾಲಾ ದಿನಗಳಿಂದ ಒಂದು ಸೂಪರ್ ಬೈಕ್ ಅಥವಾ ಬಿಗ್ ಬೈಕನ್ನು ರೈಡ್ ಮಾಡಬೇಕು ಮತ್ತು ಖರೀದಿಸಬೇಕೆಂಬ ಆಸೆಯಾಗಿತ್ತು. ಆದರೆ ಆಗಿನ ಕಾಲದಲ್ಲಿ ಅದನ್ನು ಕಾಣುವುದೇ ಅಪರೂಪವಾಗಿತ್ತು. ಇದೀಗ ನಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದುವೇ ನನ್ನ ಕನಸಿನ ಬೈಕ್ ಡುಕಾಟಿ 969 ಪನಿಗಾಲೆ ಕಾರ್ಸ್ ” ಎಂದು ಮನೋರಂಜನ್ ಬರೆದುಕೊಂಡಿದ್ದಾರೆ.
Advertisement
Advertisement
ಬೈಕ್ ವಿಶೇಷ:
ಡುಕಾಟಿ 969 ಎರಡು ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಂಗಳೂರಿನ ಶೋರೋಂನಲ್ಲಿ ಪನಿಗಾಲೆ ಕಾರ್ಸ್ ಬೈಕಿಗೆ 15.30 ಲಕ್ಷ ರೂ. ದರ ಇದ್ದರೆ, ಪನಿಗಾಲೆ ಸ್ಟ್ಯಾಂಡರ್ಡ್ ಬೈಕಿಗೆ 14.21 ಲಕ್ಷ ರೂ. ದರವಿದೆ. 955 ಸಿಸಿ ಇರುವ ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲಿಗೆ 14 ಕಿಮೀ ಮೈಲೇಜ್ ನೀಡುತ್ತದೆ. ಆರ್‌ಟಿಒ, ವಿಮೆ ಎಲ್ಲ ಸೇರಿದಾಗ ಒಟ್ಟು ಪನಿಗಾಲೆ ಕಾರ್ಸ್ ಆನ್ ರೋಡ್ ದರ 18.44 ಲಕ್ಷ ರೂ. ಆಗುತ್ತದೆ ಎಂದು ಆಟೊಮೊಬೈಲ್ ಸೈಟ್‍ಗಳು ಮಾಹಿತಿ ನೀಡಿವೆ.
ಸದ್ಯಕ್ಕೆ ಮನೋರಂಜನ್ ‘ಪ್ರಾರಂಭ’ ಹಾಗೂ ‘ಚಿಲ್ಲಂ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
https://www.facebook.com/TheManoranjanRavichandran/videos/2539439772951491/