ಕೋಲ್ಕತ್ತಾ: ಕಳೆದ ವಾರವಷ್ಟೇ ಕ್ರಿಕೆಟ್‍ಗೆ (Cricket) ವಿದಾಯ ಘೋಷಿಸಿದ್ದ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿಯವರು (Manoj Tiwary) ಮತ್ತೆ ಕ್ರಿಕೆಟ್‍ಗೆ ಮರಳುತ್ತಿದ್ದಾರೆ. ಬಂಗಾಳ (Bengal) ಕ್ರಿಕೆಟ್‍ಗಾಗಿ ಆಡಲು ಬಯಸುತ್ತಿರುವ ಕಾರಣ ತಮ್ಮ ನಿವೃತ್ತಿಯ ನಿರ್ಧಾರವನ್ನು ಬದಲಾಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಬಂಗಾಳ ಕ್ರಿಕೆಟ್ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಅವರೊಂದಿಗೆ ಚರ್ಚಿಸಿದ ನಂತರ ಮನೋಜ್ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ತಿವಾರಿ ಅವರು ಕಳೆದ ಗುರುವಾರ ನಿವೃತ್ತಿ ಘೋಷಿಸಿದ್ದರು. ಆದರೆ ಈಗ ಸಿಎಬಿ ಮೂಲಗಳ ಪ್ರಕಾರ ಅವರು ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಒಂದು ವರ್ಷದಲ್ಲಿ BCCI ಪಾವತಿಸಿದ ಟ್ಯಾಕ್ಸ್ ಎಷ್ಟು ಗೊತ್ತೆ?
Advertisement
Advertisement
ಕಳೆದ ವರ್ಷ ಮನೋಜ್ ತಿವಾರಿ ಅವರ ನಾಯಕತ್ವದಲ್ಲಿ ಬೆಂಗಾಲ್ ತಂಡ ರಣಜಿ ಟ್ರೋಫಿ ಫೈನಲ್ ತಲುಪಿತ್ತು. ಮನೋಜ್ ತಿವಾರಿ ಅನುಭವಿ ಆಟಗಾರನಾಗಿರುವ ಹಿನ್ನೆಲೆ ಅವರು ತಂಡವನ್ನು ತೊರೆಯುವುದು ನಷ್ಟ ಉಂಟು ಮಾಡಲಿದೆ. ಈ ವಿಚಾರವನ್ನು ಸ್ನೇಹಶಿಶ್ ಗಂಗೂಲಿ ಅವರು ಮನೋಜ್ ತಿವಾರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
Advertisement
ಮನೋಜ್ ತಿವಾರಿ ಕ್ರಿಕೆಟ್ ಜೊತೆಗೆ ರಾಜಕೀಯದಲ್ಲೂ ಹೊಸ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಪ್ರಸ್ತುತ ಪಶ್ಚಿಮ ಬಂಗಾಳದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿದ್ದಾರೆ.
Advertisement
2015ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ತಿವಾರಿ 12 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದರು. ಇದರಲ್ಲಿ ಒಂದು ಅರ್ಧ ಶತಕ, ಒಂದು ಶತಕ ಸೇರಿದಂತೆ ಒಟ್ಟು 287 ರನ್ ಕಲೆಹಾಕಿದ್ದಾರೆ.
ಐಪಿಎಲ್‍ನಲ್ಲಿ ಮನೋಜ್ ತಿವಾರಿ ಕೊಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 98 ಪಂದ್ಯಗಳನ್ನಾಡಿರುವ ಅವರು ಒಟ್ಟು 1,686 ರನ್ ಬಾರಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳೂ ಸೇರಿವೆ. ಇದನ್ನೂ ಓದಿ: ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ
Web Stories