ಬಾಲಿವುಡ್ ನಟ ಮನೋಜ್ ಬಾಜಪೇಯಿ (Manoj Bajpayee) ನಟಿಸಿದ ‘ಭಾಯ್ಯಾ ಜಿ’ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಅವರ ಕೆರಿಯರ್‌ನ 100ನೇ ಚಿತ್ರವಾಗಿದೆ. ಈ ಸಂದರ್ಶನವೊಂದರಲ್ಲಿ ಅವರು ಆಡಿದ ಮಾತು ವೈರಲ್ ಆಗಿದೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಯಾರ ಇದುವರೆಗೂ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಗುಲ್ಜಾರ್ ಸಾಬ್, ಗೋವಿಂದ್ ನಿಹಲಾನಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಸಂಜಯ್ ಲೀಲಾ ಬನ್ಸಾಲಿ ಹೆಸರು ತೆಗೆದುಕೊಂಡು ಅವರ ಜೊತೆ ಕೆಲಸ ಮಾಡುವ ಆಸಕ್ತಿಯಿದೆ ಎಂದಿದ್ದಾರೆ.
ನಟ ಮನೋಜ್ ನಗುತ್ತಲೇ, ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಚಿತ್ರಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದಿದ್ದಾರೆ. ಅವರು ವಿಭಿನ್ನ ರೀತಿಯ ನಿರ್ಮಾಪಕ, ನಿರ್ದೇಶಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಹಿಂದೆ ‘ದೇವದಾಸ್’ ಸಿನಿಮಾದಲ್ಲಿ ಚುನ್ನಿ ಲಾಲ್ ಪಾತ್ರವನ್ನು ನೀಡಿದರು. ಆದರೆ ಮನೋಜ್ ಅದನ್ನು ರಿಜೆಕ್ಟ್ ಮಾಡಿದ್ದರು. ದೇವದಾಸ್ ಪಾತ್ರದಲ್ಲಿ ನಟಿಸಲು ಇಷ್ಟವಿದ್ದ ಕಾರಣ ಆ ಪಾತ್ರವನ್ನು ಕೈ ಬಿಟ್ಟಿರೋದಾಗಿಯೂ ಹೇಳಿಕೊಂಡಿದ್ದಾರೆ.