– ಸಹೋದ್ಯೋಗಿಯನ್ನ ಕಳೆದುಕೊಂಡು ಕಣ್ಣೀರಿಟ್ಟ ಸ್ಮೃತಿ ಇರಾನಿ
ಪಣಜಿ: ತೀವ್ರ ಅನಾರೋಗ್ಯ ಕಾರಣ ಇಹಲೋಕ ತ್ಯಜಿಸಿದ ಸರಳ ಮತ್ತು ಸಜ್ಜನ ರಾಜಕಾರಣಿ, ದೇಶಕಂಡ ಅತ್ಯುತ್ತಮ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಪಣಜಿಯ ಮಿರಮಾರ್ ಬೀಚ್‍ನಲ್ಲಿ ಪರಿಕ್ಕರ್ ಮಕ್ಕಳಾದ ಉತ್ಪಲ್ ಮತ್ತು ಅಭಿಜಿತ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಮನೋರ್ ಪರಿಕ್ಕರ್ ಅಂತ್ಯಕ್ರಿಯೆಗೆ ನಡೆಯಿತು. ಇದಕ್ಕೂ ಮುನ್ನ ಪರಿಕ್ಕರ್ ಅವರ ಮೃತದೇಹವನ್ನು ಕಲಾ ಅಕಾಡೆಮಿಯಿಂದ ಎಸ್‍ಎಜಿ ಮೈದಾನದವರೆಗೆ ಅಂತಿಮ ಯಾತ್ರೆಯಲ್ಲಿ ತರಲಾಯಿತು. ಈ ಅಂತಿಮ ಯಾತ್ರೆಯಲ್ಲಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವರು ನಮನ ಸಲ್ಲಿಸಿದರು. ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಅವರ ಮಕ್ಕಳ ಬಳಿಗೆ ತೆರಳಿದ ಮೋದಿ ಕ್ಷಣ ಕಾಲ ಮೌನವಾಗಿ ನಿಂತಿದ್ದರು. ಈ ವೇಳೆ ಅಂತಿಮ ದರ್ಶನ ಪಡೆಯಲು ಆಗಮಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು, ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಾ ತೆರಳಿದ್ದು ಕಂಡು ಬಂತು.
Advertisement
ಪರಿಕ್ಕರ್ ಅವರ ನಿಧನದಿಂದಾಗಿ ಇಂದು ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೇ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಅಂತಿಮವಾಗಿ ಪರಿಕ್ಕರ್ ಅವರು ಜನವರಿಯಲ್ಲಿ ನಡೆದ ಮಾಂಡೋವಿ ನದಿ ನಿರ್ಮಿಸಿಲಾಗಿದ್ದ ಅಟಲ್ ಸೇತುವೆಯನ್ನು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ್ದರು. ಈ ವೇಳೆ ನನ್ನ ಅಂತಿಮ ಉಸಿರು ಇರುವವರೆಗೂ ಗೋವಾ ಸಿಎಂ ಆಗಿ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು. ಇದರಂತೆಯೇ ಅವರು ತಮ್ಮ ಕೊನೆ ಉಸಿರಿನವರೆಗೂ ಸಿಎಂ ಆಗಿಯೇ ಇಹಲೋಕ ತ್ಯಜಿಸಿದ್ದಾರೆ.
Advertisement
Panaji: Union Minister Smriti Irani gets emotional as she pays last respects to Goa CM #ManoharParrikar. pic.twitter.com/NOOucOU8iO
— ANI (@ANI) March 18, 2019
Prime Minister Narendra Modi, Defence Minister Nirmala Sitharaman and Governor Mridula Sinha meet family of Goa CM #ManoharParrikar, in Panaji. pic.twitter.com/X11DkUJofU
— ANI (@ANI) March 18, 2019