ಚಂಡೀಗಢ: ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಂಟಿ ರಾಜಧಾನಿಯಾಗಿಯೇ ಚಂಡೀಗಢ ಉಳಿಯುತ್ತದೆ ಎಂದಯ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿ ಉಳಿಯುತ್ತದೆ. ಎರಡೂ ರಾಜ್ಯಗಳು ಚಂಡೀಗಢದ ವಿಷಯವನ್ನು ಹೊರತುಪಡಿಸಿ ಚರ್ಚಿಸಲು ಹಲವಾರು ವಿಷಯಗಳನ್ನು ಹೊಂದಿವೆ ಎಂದರು.
Advertisement
Advertisement
ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಕೇಂದ್ರ ಸೇವಾ ನಿಯಮಗಳನ್ನು ಅನ್ವಯಿಸುವಂತೆ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಅವರು, ಪಂಜಾಬ್ ಸರ್ಕಾರವು ಈ ವಿಷಯದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಂಡೀಗಢವನ್ನು ಪಂಜಾಬ್‌ಗೆ ವರ್ಗಾಯಿಸಿ: ಪಂಜಾಬ್ ಸಿಎಂ ನಿರ್ಣಯ ಮಂಡನೆ
Advertisement
Advertisement
ಈ ಹಿಂದೆ, ಚಂಡೀಗಢದ ನೌಕರರು ಕೇಂದ್ರ ಸರ್ಕಾರದ ಪ್ರತಿಯೊಂದು ಆದೇಶಕ್ಕೂ ಪಂಜಾಬ್ ಸರ್ಕಾರವನ್ನು ಅವಲಂಬಿಸಬೇಕಾಗಿತ್ತು. ಅದಕ್ಕಾಗಿ ಕೇಂದ್ರವು ನೌಕರರ ಬೇಡಿಕೆಗಳು ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪಂಜಾಬ್ ಸರ್ಕಾರವು ಈ ವಿಷಯದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ, ಈ ಕ್ರಮವು ನೌಕರರಿಗೆ ಅತ್ಯಂತ ಪ್ರಯೋಜನವನ್ನು ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ
ಶುಕ್ರವಾರ ಪಂಜಾಬ್‍ನಲ್ಲಿ ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿದೆ. ಚಂಡೀಗಢದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯಿಂದ ರಾಜಕೀಯ ಗದ್ದಲದ ನಡುವೆ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿತ್ತು.
ಈ ಅಧಿವೇಶನದಲ್ಲಿ ಚಂಡೀಗಢವನ್ನು ತಕ್ಷಣವೇ ಪಂಜಾಬ್‍ಗೆ ವರ್ಗಾಯಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿರ್ಣಯ ಮಂಡಿಸಿದ್ದಾರೆ. ಜೊತೆಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ