ಬೆಂಗಳೂರು: ಸೇವೆ ಅನ್ನೊದು ಸಮಾಜಕ್ಕೆ ಪೂರಕವಾಗಿರಬೇಕು. ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಬೆಂಗಳೂರಿನ ಎನ್‌ಜಿಓ (NGO) ತಂಡವೊಂದರ ಸಮಾಜಮುಖಿ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕೀ ಬಾತ್‌ನಲ್ಲಿ (Mann Ki Baat) ಪ್ರಶಂಸಿದ್ದಾರೆ.
ಬೆಂಗಳೂರಿನ (Bengaluru) ಎನ್‌ಜಿಓ ಯೂತ್ ಫಾರ್ ಪರಿವರ್ತನ್ (Youth for Parivarthan) ನಗರದ ಬಹುತೇಕ ಕಡೆ ಸ್ವಚ್ಛತೆ ಮಾಡುವುದರ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಸ್ಥಳೀಯರ ಅಷ್ಟೇ ಅಲ್ಲ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಿನ್ನೆ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1 ನಿಮಿಷಕ್ಕೂ ಹೆಚ್ಚು ಸಮಯ ಈ ಎನ್‌ಜಿಓ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವಕರೇ ಸೇರಿ ನಗರ ಸೇರಿದಂತೆ ಹಲವೆಡೆ ಸ್ವಯಂಪ್ರೇರಿತವಾಗಿ ಸ್ವಚ್ಛತೆ ಮಾಡುವ ಮೂಲಕ ನಗರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ
Advertisement
Advertisement
ಈ ಸ್ವಯಂ ಸೇವಾ ಸಂಘ 800ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈಗಾಗಲೇ ಯೂತ್ ಫಾರ್ ಪರಿವರ್ತನ್ ನಗರದ 370ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋಡೆಗಳನ್ನು ಸ್ವಚ್ಛಗೊಳಿಸಿ, ಚಿತ್ರಗಳಿಂದ ಆಕರ್ಷಕವಾಗಿ ಅಲಂಕರಿಸಿದೆ. ಪ್ರತಿ ಭಾನುವಾರ ಈ ತಂಡ ಮುಂಚಿತವಾಗಿ ಗುರುತಿಸಿ ಜಾಗವನ್ನು ಶುಚಿಗೊಳಿಸುವ ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೇ ಸಾಕಷ್ಟು ಸರ್ಕಾರಿ ಶಾಲಾ ಮಕ್ಕಳಿಗೆ ಇತ್ತೀಚಿನ ಟೆಕ್ನಾಲಜಿ ಸೇರಿದಂತೆ ಉತ್ತಮ ಜೀವನ ಶೈಲಿಯ ಬಗೆಗಿನ ವಿಶೇಷ ಕಾರ್ಯಕ್ರಮಗಳನ್ನ ಸಹ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ರಾಜಕೀಯ ಬಿಕ್ಕಟ್ಟು – ಅಧಿಕಾರ ಹಿಡಿಯುತ್ತಾ ಬಿಜೆಪಿ?