ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಮಿಶ್ರಣ ಹಗರಣ ಆಯ್ತು, ಇದೀಗ ಹಾಲಿಗೆ ರಾಸಾಯನಿಕ ಬೆರಕೆ ಮಾಡುವುದು ಬೆಳಕಿಗೆ ಬಂದಿದೆ. ಈ ಮೂಲಕ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನ್‌ಮುಲ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ.
Advertisement
ಕಳೆದ ವರ್ಷವಷ್ಟೇ ಮನ್‌ಮುಲ್‌ಗೆ ಸರಬರಾಜು ಆಗುವ ಹಾಲಿಗೆ ನೀರು ಮಿಶ್ರಣವಾಗುತ್ತಿದೆ ಎಂಬ ಹಗರಣ ಬೆಳಕಿಗೆ ಬಂದಿತ್ತು. ಪ್ರಕರಣ ಸಿಐಡಿ ತನಿಖೆಯಲ್ಲಿರುವಾಗಲೇ ಹಾಲಿಗೆ ರಾಸಾಯನಿಕ ಕಲಬೆರಕೆ ಹಗರಣ ಬೆಳಕಿಗೆ ಬಂದಿರುವುದು ರೈತರಲ್ಲಿ ಆತಂಕ ಮೂಡಿದೆ. ಇದನ್ನೂ ಓದಿ: ಮೃತ ಕೋವಿಡ್ ಕುಟುಂಬಗಳಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ – ಬ್ಯಾಂಕುಗಳಲ್ಲಿ ನಗದು ಆಗ್ತಿಲ್ಲ ಚೆಕ್
Advertisement
ಏನಿದು ಹಾಲಿಗೆ ರಾಸಾಯನಿಕ ಬೆರಕೆ?
ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚು ತೋರಿಸುವಂತೆ ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಹಾಲಿಗೆ ನೀರು ಹಾಕಿದಾಗ ಕಡಿಮೆ ಕೊಬ್ಬಿನಾಂಶ ತೋರಬಾರದೆಂದು ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಉಪ್ಪಿನಾಂಶದ ರಾಸಾಯನಿಕ ಕಲಬೆರಕೆಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಟ್ಯಾಂಕರ್‌ನೊಳಗೆ ಮತ್ತೊಂದು ಬೇಬಿ ಟ್ಯಾಂಕ್ ನಿರ್ಮಿಸಿ ಕೋಟಿ ಕೋಟಿ ಹಣವನ್ನು ಹಾಲಿನ ರೂಪದಲ್ಲಿ ಮನ್‌ಮುಲ್‌ಗೆ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ನಿಜರೂಪ ಬಯಲಾಗಿದೆ.
Advertisement
Advertisement
ಹೇಗೆ ಬೆಳಕಿಗೆ ಬಂತು?
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಹೊನ್ನಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ಮೊದಲಿಗೆ ರಾಸಾಯನಿಕ ಮಿಶ್ರಣ ಪತ್ತೆಯಾಗಿದೆ. ಗ್ರಾಮದಲ್ಲಿ ಶೇಖರಣೆಯಾದ ಹಾಲಿಗೆ ನೀರು ಹಾಗೂ ರಾಸಾಯನಿಕ ಬೆರಸಿ ಮನ್‌ಮುಲ್‌ಗೆ ವಂಚನೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ನಂದಿನಿ ಹಾಲಿನ ಮೇಲೆ ಅನುಮಾನ ಮೂಡುವಂತೆ ವಂಚಕರು ಪ್ಲ್ಯಾನ್ ಮಾಡಿದ್ದಾರೆ. ಪ್ರತಿನಿತ್ಯ 35 ಕ್ಯಾನ್ ಹಾಲು ಸರಬರಾಜು ಮಾಡುತ್ತಿದ್ದ ಕೆ.ಹೊನ್ನಲಗೆರೆ ಡೈರಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ. ಇದೀಗ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸುವಂತೆ ಮನ್‌ಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿರುವ ಪ್ರವಾಸಿತಾಣಗಳಿಗೆ ಜಾರಿಯಾಗುತ್ತಾ ಟಫ್‍ರೂಲ್ಸ್..?