ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ (Manmohan Singh) ಅವರಿಗೆ ಹಿಂದಿ (Hindi) ಓದಲು ಬರುತ್ತಿರಲಿಲ್ಲ. ಅವಿಭಜಿತ ಪಂಜಾಬ್‌ನಲ್ಲಿ (ಈಗಿನ ಪಾಕಿಸ್ತಾನ ಪಂಜಾಬ್‌ನಲ್ಲಿರುವ ಗಾಹ್) ಸೆಪ್ಟೆಂಬರ್ 26, 1932 ರಲ್ಲಿ ಜನಿಸಿದರೂ ಸಿಂಗ್ ಅವರಿಗೆ ಹಿಂದಿ ಭಾಷೆಯನ್ನು ಓದಲು ಬರುತ್ತಿರಲಿಲ್ಲ.
ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅವರು ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಅವರ ಜೀವನದ ಮೊದಲ ಹನ್ನೆರಡು ವರ್ಷಗಳಲ್ಲಿ ಅವರ ಹಳ್ಳಿಗೆ ವಿದ್ಯುತ್ ಇರಲಿಲ್ಲ. ಅವರು ದೀಪದ ಬೆಳಕಿನಲ್ಲಿ ಅಧ್ಯಯನ ಮಾಡಿದ್ದರು. 14 ನೇ ವಯಸ್ಸಿನಲ್ಲಿ, ಸಿಂಗ್ ಅವರ ಕುಟುಂಬವು ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದು ಅಮೃತಸರದಲ್ಲಿ ವಾಸಿಸುತ್ತಿತ್ತು. ಇದನ್ನೂ ಓದಿ: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದು ಹೇಗೆ? 2004 ರಲ್ಲಿ ಏನಾಯ್ತು?
Advertisement
Advertisement
ಪ್ರಾಥಮಿಕ ಶಿಕ್ಷಣವನ್ನು ಉರ್ದುವಿನಲ್ಲಿ (Urdu) ಓದಿದ ಕಾರಣ ಸಿಂಗ್ ಅವರಿಗೆ ಹಿಂದಿ ಮಾತನಾಡಲು ಮಾತ್ರ ಬರುತ್ತಿತ್ತು, ವಿನಾ: ಬರೆಯಲು ಮತ್ತು ಓದಲು ಬರುತ್ತಿರಲಿಲ್ಲ. ಇದನ್ನೂ ಓದಿ: ನಾನು ಮನಮೋಹನ್ ಸಿಂಗ್ ದೊಡ್ಡ ಅಭಿಮಾನಿ ಎಂದಿದ್ದ ಒಬಾಮಾ!
Advertisement
ಪ್ರಧಾನಿಯಾಗಿದ್ದ ಸಮಯದಲ್ಲೂ ಅವರು ತಮ್ಮ ಭಾಷಣವನ್ನು ಉರ್ದುವಿನಲ್ಲಿ ಬರೆದು ಓದುತ್ತಿದ್ದರು. ಕೆಲ ಸಂದರ್ಭಗಳಲ್ಲಿ ತಮ್ಮ ಮಾತೃ ಭಾಷೆ ಪಂಜಾಬಿಯನ್ನು ಬರೆಯುವ ಲಿಪಿ ಗುರ್ಮುಖಿಯಲ್ಲಿ ಬರೆದುಕೊಳ್ಳುತ್ತಿದ್ದರು. ಮನಮೋಹನ್ ಸಿಂಗ್ ಉರ್ದು ಸಾಹಿತ್ಯ ಮತ್ತು ಕವಿತೆಯನ್ನು ಇಷ್ಟ ಪಡುತ್ತಿದ್ದರು.
Advertisement
ಪ್ರಧಾನಿಯಾಗಿದ್ದ ಸಮಯದಲ್ಲಿ ಸಿಂಗ್ ಅವರು ತಮ್ಮ ಜನ್ಮಸ್ಥಳಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಕನಸು ನನಸಾಗಿರಲಿಲ್ಲ.
ಮನಮೋಹನ್ ಸಿಂಗ್ ಅವರ 2012ರ ಸ್ವಾತಂತ್ರ್ಯ ದಿನದ ಭಾಷಣದ 17 ನಿಮಿಷ 58 ಸೆಕೆಂಡ್‌ನಲ್ಲಿ ಉರ್ದುನಲ್ಲಿ ಬರೆದಿರುವ ಪುಟವನ್ನು ನೋಡಬಹುದು