– ಜನಗಳ ಮೈಂಡ್ ಸೆಟ್, ಚಿಂತನೆ ಬದಲಾಗಬೇಕು
ಶಿವಮೊಗ್ಗ:“ನನ್ನನ್ನು ಶೂಟ್ ಮಾಡು ಅಂದೆ. ಅದಕ್ಕೆ ಅವನು ಹೋಗಿ ಮೋದಿಗೆ ಹೇಳು ಅಂದ” – ಇದು ಪಹಲ್ಗಾಮ್‌ನಲ್ಲಿ (Pahalgam) ಹತ್ಯೆಯಾದ ಮಂಜುನಾಥ್ ಅವರ ಪುತ್ರ ಅಭಿಜನ್ ಆಡಿದ ಮಾತು
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮೊದಲು ಏನೋ ಫೈರಿಂಗ್ ಮಾಡುತ್ತಿದ್ದ ಶಬ್ದ ಕೇಳಿಸಿತ್ತು. ನಾವು ಸೈನ್ಯದ ಟ್ರೈನಿಂಗ್ ನಡೀತಿರಬೇಕು, ಇಲ್ಲಾ ಏನೋ ಪಟಾಕಿ ಹೊಡಿತಿದ್ದಾರೆ ಅಂತಾ ಅನ್ಕೊಂಡ್ವಿ. ನೋಡಿದ್ರೆ ಎಲ್ಲರೂ ಓಡೋಕೆ ಶುರು ಮಾಡಿದ್ರು. ನಾನು ದೂರದಲ್ಲಿ ಕೂತಿದ್ದೆ. ಅಪ್ಪ ಅಮ್ಮ ನಂಗೆ ಏನೋ ತರೋಕೆ ಹೋದ್ರು. ನನ್ನನ್ನು ಅಲ್ಲೇ ಕೂರೋಕೆ ಹೇಳಿ ಹೋದ್ರು. ಮತ್ತೇ ಅಪ್ಪ ಅಮ್ಮನ ಜೊತೆ ನನ್ನ ಕರ್ಕೊಂಡು ಬರೋಕೆ ಹೇಳಿದ್ರು. ಅಮ್ಮ ನನ್ನ ಕರ್ಕೊಂಡು ಬರುತ್ತಿರುವಾಗ ಎಲ್ಲರೂ ಓಡೋಕೆ ಶುರುಮಾಡಿದ್ರು, ಆಗ ಅಲ್ಲಿ ಎಲ್ಲರಿಗೂ ಗೊತ್ತಾಗಿತ್ತು ಉಗ್ರರು ಫೈರಿಂಗ್ ಮಾಡುತ್ತಿದ್ದಾರೆ ಅಂತಾ. ನಾನು ಅಮ್ಮ ಓಡೋಕೆ ಶುರು ಮಾಡಿದ್ವಿ. ಅಪ್ಪ ಎಲ್ಲಿ ಅಂತಾ ಹಿಂದೆ ತಿರುಗಿ ನೋಡಿದ್ರೆ ಶೂಟ್ ಆಗಿ ಬಿದ್ದಿದ್ರು ಎಂದರು. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ
ನಮ್ಮ ಅಪ್ಪಾ ಅಲ್ಲಿ ಸತ್ರು ಅಂತಾ ಗೊತ್ತಾಗಿತ್ತು. ನಮ್ಮನ್ನೂ ಸಾಯಿಸಬೇಕಿತ್ತು ನಮ್ಮನ್ನು ಯಾಕೆ ಬಿಟ್ರಿ. ಅಪ್ಪನ್ನ ಸಾಯಿಸಿದ್ರಲ್ಲಾ ನಮ್ಮನ್ನು ಸಾಯಿಸಿ ಅಂತಾ ನಮ್ಮಮ್ಮ ಹೇಳಿದ್ದರು. ನಾನೂ ಉಗ್ರರ ಹತ್ರ ಹೋಗಿ ಕುತ್ತೇ ನಮ್ಮ ಅಪ್ಪನ್ನ ಸಾಯಿಸಿದ್ದಲ್ಲಾ ನಮ್ಮನ್ನು ಕೊಲ್ಲು ಅಂತಾ ಹೇಳಿದೆ. ಆಗ ಆ ಉಗ್ರ ಇಲ್ಲ, ಮೋದಿಗೆ ಹೋಗಿ ಹೇಳು ಎಂದು ಅಲ್ಲಿ ನಡೆದ ಘಟನೆಯನ್ನು ವಿವರಿಸಿದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ – ಯೋಧ ಹುತಾತ್ಮ
ನಾವು ಎಂಜಾಯ್ ಮಾಡೋಕೆ ಹೋಗಿದ್ವಿ. ಹೀಗೆ ನರಕ ಆಗುತ್ತದೆ. ದುರಂತ ಜೀವನ ಆಗುತ್ತೆ ಅಂತಾ ಗೊತ್ತಿರಲಿಲ್ಲ. ಜನಗಳ ಮೈಂಡ್ ಸೆಟ್ ಮತ್ತು ಚಿಂತನೆ ಬದಲಾಗಬೇಕು ಅಷ್ಟೇ. ಇಲ್ಲಾ ಅಂದ್ರೆ ಇದು ನಡೀತಾನೆ ಇರುತ್ತೆ. ನಂಗೆ ನಮ್ಮ ಸೇನೆಯ ಮೇಲೆ ಭರವಸೆ ಇದೆ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.