‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ಸಹಾಯಕ ನಿರ್ದೇಶಕ ನಿಧನ

Public TV
1 Min Read
FotoJet 65

ಮಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಸಿನಿಮಾದ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ (Anil Xavier) ಆ.27ರಂದು ನಿಧನರಾಗಿದ್ದಾರೆ. 39ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ಸಮಂತಾ ನನ್ನ ಫ್ರೆಂಡ್ ಎಂದ ಉರ್ಫಿ ಜಾವೇದ್

ಅಂಗಮಾಲಿಯಲ್ಲಿ ಫುಟ್‌ಬಾಲ್ ಆಡುವಾಗ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆ ಕೂಡಲೇ ಅನಿಲ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ (ಆ.27) ರಾತ್ರಿ ಅವರು ವಿಧಿವಶರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.

ಅಂದಹಾಗೆ, ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದ ಜೊತೆ ತಲ್ಲುಮಲ ಮತ್ತು ಥೇಕ್ಕು ವಡಕ್ಕು ಸೇರಿ ಅನೇಕ ಸಿನಿಮಾಗಳಲ್ಲಿ ಅನಿಲ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಇದೀಗ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

Share This Article