ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರು, ಯಾರಿಗೆ ಐ ಲವ್ ಯೂ ಅಂತ ಪ್ರಪೋಸ್ ಮಾಡುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮನೆಯೊಳಗೆ ಸರ್ ಪ್ರೈಸ್ ಎನ್ನುವಂತೆ ಕಾಲಿಟ್ಟಿದ್ದ ಮಂಜು ಪಾವಗಡಗೆ (Manju Pavagada) ನಟಿ ಅಮೂಲ್ಯಗೌಡ ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡಿದ್ದರು. ಈ ನಡೆಗೆ ರಾಕೇಶ್ ಅಡಿಗ ತುಂಬಾ ನೊಂದುಕೊಂಡಿದ್ದರು. ಆ ದೃಶ್ಯವನ್ನು ಕಂಡು ನನ್ನ ನಾಗರಹಾವು ಕಡಿದಷ್ಟು ನೋವು ಆಗುತ್ತಿದೆ ಎಂದು ಕಾಮೆಂಟ್ ಕೂಡ ಮಾಡಿದ್ದರು.
ಈ ಮಧ್ಯೆ ಅಮೂಲ್ಯ ಗೌಡ (Amulya) ಅವರ ಪ್ರಪೋಸ್ ಅನ್ನು ಸ್ವೀಕರಿಸದೇ, ತಿರಸ್ಕರಿಸದೇ ತಟಸ್ಥವಾಗಿದ್ದ ಮಂಜು ಪಾವಗಡ ಅವರು ದೀಪಿಕಾ ದಾಸ್ ಅವರಿಗೆ ‘ಐ ಲವ್ ಯೂ’ ಹೇಳಿದ್ದಾರೆ. ಹಾವು ಏಣಿ ಆಟವಾಡಲೆಂದೇ ಬಂದಿದ್ದ ಮಂಜು, ಈ ರೀತಿಯಾಗಿ ಪ್ರಪೋಸ್ ಮಾಡಿದಾಗ ಅದಕ್ಕೆ ಅಷ್ಟೇ ಕೂಲಾಗಿಯೇ ದೀಪಿಕಾ (Deepika Das) ಉತ್ತರಿಸಿದ್ದಾರೆ. ‘ಐ ಲವ್ ಯೂ ಟೂ’ ಎಂದು ಹೇಳುವ ಮೂಲಕ ಪ್ರೀತಿಯನ್ನು ಸ್ವೀಕರಿಸಿದ್ದಾರೆ.
ಕಳೆದ ಸೀಸನ್ ನಲ್ಲಿ ಮನೆ ಮಾತಾಗಿದ್ದ ಸ್ಪರ್ಧಿ ಮಂಜು ಪಾವಗಡ. ನಗಿಸುತ್ತಲೇ, ಕಾಲೆಳೆಯುತ್ತದೇ ಸಖತ್ ಮನರಂಜನೆ ನೀಡಿದ್ದ ಸ್ಪರ್ಧಿ. ಇದೀಗ ಅವರು ದೊಡ್ಮನೆಗೆ ಲಗ್ಗೆ ಇಟ್ಟಿದ್ದು, ಸ್ವತಃ ಮನೆ ಒಳಗೆ ಇರುವವರಿಗೆ ಅಚ್ಚರಿ ಮೂಡಿಸಿದೆ. ಮಂಜು ಪ್ರವೇಶ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅನುಪಮಾ ಎಲಿಮಿನೇಷನ್ ನಂತರ 8 ಜನ ಸ್ಪರ್ಧಿಗಳಿರುವ ಮನೆಯಲ್ಲಿ, ಕೇವಲ ಜಟಾಪಟಿ ಮಾತ್ರ ಕಾಣಿಸುತ್ತಿತ್ತು. ಅದನ್ನು ಶಮನ ಮಾಡಲು ಮಂಜು ಬಂದಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್
ಹಾವು – ಏಣಿ ಟಾಸ್ಕ್ ವೇಳೆ ಮಂಜು ಪಾವಗಡ ಕೂಡ ಸ್ಪರ್ಧಿಗಳ ಜೊತೆಗೆ ಆಟವಾಡಿದ್ದಾರೆ. ಸ್ಪರ್ಧಿಗಳು ಹೇಳುವ ಸಂಖ್ಯೆಗೆ ದಾಳ ಕೂಡ ಹಾಕಿದ್ದಾರೆ. ಈ ವೇಳೆ, ಮಂಜುಗೆ ಅಮೂಲ್ಯ ಪ್ರಪೋಸ್ ಮಾಡಿದ್ದು, ಇದನ್ನ ನೋಡಿರೋ ರಾಕಿ, ಅಯ್ಯೋ ನನಗೆ ಹಾವು ಕಚ್ಚಿದ ಹಾಗೇ ಆಗುತ್ತಿದೆ ಎಂದಿದ್ದಾರೆ. ರಾಕಿ ಮಾತಿಗೆ ಮನೆಮಂದಿ ನಕ್ಕಿದ್ದಾರೆ.
ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.