ಮಂಗಳೂರು: ಗೌಡ ಸಾರಸ್ವತ ಸಮಾಜದ ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶ್ರೀ ಮದನಂತೇಶ್ವರ ದೇವರ ಸನ್ನಿಧಿಯಲ್ಲಿ ಷಷ್ಠಿ ಬ್ರಹ್ಮ ರಥೋತ್ಸವ ಅಂಗವಾಗಿ ಇಂದು ಪ್ರಾತಃ ಸ್ವರ್ಣ ಲಾಲ್ಕಿ ಉತ್ಸವ ಜರಗಿತು. ಬಳಿಕ ಸಾಯಂಕಾಲ ಶ್ರೀ ದೇವರ ಬ್ರಹ್ಮ ರಥೋತ್ಸವ ನೆರವೇರಿತು.
Advertisement
ಸಾಯಂಕಾಲ ಶ್ರೀದೇವರ ಬ್ರಹ್ಮ ರಥೋತ್ಸವ ಪ್ರಯುಕ್ತ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ರಥಾರೂಡ ಶ್ರೀದೇವರಿಗೆ ಮಂಗಳಾರತಿ ನೆರವೇರಿಸಿದರು. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್
Advertisement
Advertisement
ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಕೋಟೇಶ್ವರ ದಿನೇಶ್ ಕಾಮತ್, ಛತ್ರಪತಿ ಪ್ರಭು, ಯೋಗೇಶ್ ಕಾಮತ್, ಕೃಷ್ಣ ಭಟ್, ರಾಘವೇಂದ್ರ ಪ್ರಭು ಹಾಗೂ 18 ಪೇಟೆಯ ಸದಸ್ಯರು ಉಪಸ್ಥಿತರಿದ್ದರು. ಷಷ್ಠಿ ಮಹೋತ್ಸವ ಪ್ರಯುಕ್ತ ದೇಶ, ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡರು. ರಾತ್ರಿ ಸಮಾರಾಧನೆ ನಡೆಯಿತು. ಇದನ್ನೂ ಓದಿ: 100 ಕೋಟಿ ರೂ. ಆಸೆಗೆ, ಒಂದು ಮೂಕ್ಕಾಲು ಕೋಟಿ ಹಣ ಕಳ್ಕೊಂಡ