ನವದೆಹಲಿ: ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ (Delhi Liquor Excise Policy) ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ನ್ಯಾಯಾಂಗ ಬಂಧನವನ್ನು (Judicial Custody) ಮೇ 31ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಸಿಸೋಡಿಯಾ ಅವರ ಕಸ್ಟಡಿಯನ್ನು ವಿಸ್ತರಿಸಿದರು.
ನ್ಯಾಯಾಂಗ ಬಂಧನದ ಅವಧಿ ಮುಗಿದಿರುವ ಹಿನ್ನೆಲೆ ಸಿಸೋಡಿಯಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಹಿಂದೆ ಸಿಸೋಡಿಯ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಜಾ ಮಾಡಿದ್ದ ಹಿನ್ನೆಲೆ ಕೋರ್ಟ್ ಇಂದು ನ್ಯಾಯಾಂಗ ಬಂಧನ ವಿಸ್ತರಿಸಿದೆ. ಇದನ್ನೂ ಓದಿ: ಎಮಿರೇಟ್ಸ್ ವಿಮಾನಕ್ಕೆ ಸಿಲುಕಿ 40 ರಾಜಹಂಸ ಹಕ್ಕಿಗಳು ಸಾವು
2023ರ ಫೆಬ್ರವರಿ 26 ರಿಂದ ಸಿಬಿಐ ಬಂಧಿಸಿದ ನಂತರ ಸಿಸೋಡಿಯಾ ಬಂಧನದಲ್ಲಿದ್ದಾರೆ. ಬಳಿಕ ಇ.ಡಿ ಅವರನ್ನು ಬಂಧಿಸಿತ್ತು. ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಸಹ ಬಂಧಿಸಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಇನ್ನೂ ಪ್ರಧಾನಿಯಾಗಿಲ್ಲ ಆಗಲೇ ದುರಹಂಕಾರಿಯಾಗಿದ್ದಾರೆ: ಕೇಜ್ರಿವಾಲ್ ವಾಗ್ದಾಳಿ
ಹೊಸ ಅಬಕಾರಿ ನೀತಿಯಲ್ಲಿ ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸಲಾಗಿದೆ. ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಎಲ್ -1 ಪರವಾನಗಿಯನ್ನು ವಿಸ್ತರಿಸಲಾಗಿದೆ ಎಂಬ ಆರೋಪವಿದೆ. ಇದನ್ನೂ ಓದಿ: ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ