ನವದೆಹಲಿ: ಅಬಕಾರಿ ನೀತಿ (Excise Policy) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಆಪ್ತ ವಿಜಯ್ ನಾಯರ್ (Vijay Nair) ನನ್ನು ಸಿಬಿಐ ಬಂಧಿಸಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಇದೇ ಮೊದಲ ಬಂಧನವಾಗಿದೆ. ಓನ್ಲಿ ಮಚ್ ಲೌಡರ್ ಎಂಟರ್‌ಟೈನ್‌ಮೆಂಟ್ ಮತ್ತು ಈವೆಂಟ್ ಮೀಡಿಯಾ ಕಂಪನಿಯ ಮಾಜಿ ಸಿಇಒ ಆಗಿದ್ದ ವಿಜಯ್ ನಾಯರ್ (Vijay Nair) ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದಾರೆ ಎಂದು ಸಿಬಿಐ (CBI) ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ
Advertisement
Advertisement
ಕಳೆದ ಆಗಸ್ಟ್ 19 ರಂದು ಸಿಬಿಐ ನಡೆಸಿದ ದಾಳಿಯಲ್ಲಿ ವಿಜಯ್ ನಾಯರ್ ನಾಪತ್ತೆಯಾಗಿದ್ದರು. ನಂತರ 8 ಆರೋಪಿಗಳಿಗೆ ಆಗಸ್ಟ್ 21ರಂದು ಲುಕ್‌ಔಟ್ ನೋಟಿಸ್ (LOC) ನೀಡಲಾಗಿತ್ತು. ಇದರಲ್ಲಿ ಉದ್ಯಮಿ ವಿಜಯ್ ನಾಯರ್ ಸಹ ಸೇರಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಇದನ್ನೂ ಓದಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ
Advertisement
Advertisement
ಇದೀಗ ಬಂಧಿತನಾಗಿರುವ ವಿಜಯ್ ನಾಯರ್ ದೇಶದಿಂದ ಪಲಾಯನ ಮಾಡಿರಲಿಲ್ಲ. ವೈಯಕ್ತಿಕ ಕೆಲಸದ ಕಾರಣಗಳಿಂದ ವಿಶ್ರಾಂತಿಯಲ್ಲಿದ್ದೆ ಎಂದು ಸ್ಪಷ್ಟಪಡಿಸಿದ್ದಾರಲ್ಲದೇ, ಸಿಬಿಐನೊಂದಿಗೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.