ಆಪ್ ಅಧಿಕಾರಕ್ಕೆ ಬಂದ್ರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ: ಕೇಜ್ರಿವಾಲ್

Public TV
2 Min Read
Arvind Kejriwal Manish Sisodia

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ (AAP) ಅಧಿಕಾರ ಉಳಿಸಿಕೊಂಡಿರೆ ಮನೀಶ್ ಸಿಸೋಡಿಯಾ (Manish Sisodia) ಮತ್ತೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಘೋಷಿಸಿದ್ದಾರೆ.

ಜಂಗ್‌ಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಸೋಡಿಯಾ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುತ್ತಾರೆ ಮತ್ತು ಅವರೊಂದಿಗೆ ನೀವೆಲ್ಲರೂ ಉಪಮುಖ್ಯಮಂತ್ರಿಗಳಾಗುತ್ತೀರಿ. ಹೀಗಾಗಿ ನೀವು ಮನೀಶ್ ಸಿಸೋಡಿಯಾ ಅವರನ್ನು ಆಯ್ಕೆ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು. ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

Arvind Kejriwal Manish Sisodia 1

ಹಾಲಿ ಎಎಪಿ ಸರ್ಕಾರದ ಬಹುಪಾಲು ಅವಧಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಉಪನಾಯಕರಾಗಿ ಸೇವೆ ಸಲ್ಲಿಸಿದ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 2023ರಲ್ಲಿ ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ನಂತರ ಅವರು ರಾಜೀನಾಮೆ ನೀಡಿದರು. ಸಿಸೋಡಿಯಾ ಪ್ರಸುತ್ತ ಪತ್ಪರ್‌ಗಂಜ್‌ನಿಂದ ಶಾಸಕರಾಗಿದ್ದಾರೆ. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಜಂಗ್‌ಪುರದಿಂದ ಸ್ಪರ್ಧಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ

ಈ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಕಳೆದ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಅವರವರ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆಯಲು ಬಿಡಲಿಲ್ಲ. ಎಂಟು ಮಂದಿಯೂ ತಮ್ಮ ವಿಧಾನಸಭೆಯನ್ನು ನರಕವನ್ನಾಗಿಸಿದ್ದಾರೆ. ನೀವು ಇಂತಹ ತಪ್ಪು ಮಾಡಬೇಡಿ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ವಂಚಕರ ಜಾಲ – ನಕಲಿ ಯುಪಿಐ ಐಡಿಗಳ ಮೂಲಕ ಭಕ್ತರಿಗೆ ವಂಚನೆ

ಮನೀಶ್ ಸಿಸೋಡಿಯಾ ಅವರ ಕೊಡುಗೆ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಮತ್ತು ನಾನು ಒಟ್ಟಾಗಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ಮಾಡಿದ್ದೇವೆ. ಈಗ ತಮ್ಮ ಸರ್ಕಾರ ರಚನೆಯಾದರೆ ಇಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಇದನ್ನೂ ಓದಿ: ಮೈಸೂರು| ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ!

ಎಎಪಿ ಸರ್ಕಾರಿ ಶಾಲೆಗಳನ್ನು ನಿರ್ಮಿಸುತ್ತದೆ. ಬಿಜೆಪಿ ‘ಅವುಗಳನ್ನು ಮುಚ್ಚುವ’ ನಿರ್ಧಾರ ಮಾಡಿದೆ. ಯಾರನ್ನು ಆಯ್ಕೆ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಜಂಗ್‌ಪುರದಲ್ಲಿ ಆಪ್ ಗೆದ್ದರೆ ಇಲ್ಲಿನ ಪ್ರತಿಯೊಬ್ಬ ಸಹೋದರ ಸಹೋದರಿಯರೂ ಉಪಮುಖ್ಯಮಂತ್ರಿಯಾಗುತ್ತಾರೆ. ಇಲ್ಲಿನ ಜನರ ಕೆಲಸವನ್ನು ತಡೆಯುವ ಧೈರ್ಯ ಯಾರಿಗೂ ಬರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಡೆಯುವ ಅಮೃತ ಸ್ನಾನದ ವಿಶೇಷತೆ, ಹಿನ್ನೆಲೆ ಏನು?

Share This Article