ನವದೆಹಲಿ: ಪ್ರಧಾನಿ ಮೋದಿ ತನಿಖೆಯಲ್ಲಿ ನನಗೆ ಕ್ಲೀನ್‌ಚಿಟ್ ಸಿಕ್ಕಿದೆ. ನಮ್ಮ ಮನೆ ಹಾಗೂ ಬ್ಯಾಂಕ್ ಲಾಕರ್‌ನಲ್ಲಿ ಸಿಬಿಐಗೆ ಏನೂ ಸಿಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.
ಘಾಜಿಯಾಬಾದ್ ಬ್ಯಾಂಕ್‌ನಲ್ಲಿನ ಲಾಕರ್ ಅನ್ನು ಇಂದು ಸಿಬಿಐ ಅಧಿಕಾರಿಗಳು ಪರಿಶೀಲಿಸಿದರು. ದಾಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸೋಡಿಯಾ, ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ – ರೇಸ್‌ನಲ್ಲಿದ್ದಾರೆ ಶಶಿ ತರೂರ್
Advertisement
Advertisement
ಲಾಕರ್‌ನಲ್ಲಿ ನನ್ನ ಮಕ್ಕಳು ಮತ್ತು ಪತ್ನಿಗೆ ಸೇರಿದ ಸುಮಾರು 70,000 ರೂ. ಮೌಲ್ಯದ ಚಿನ್ನಾಭರಣವಿದೆ. ಪ್ರಧಾನಿ ಮೋದಿ ನಿರ್ದೇಶನದಲ್ಲಿ ಮನೆಗೆ ದಾಳಿ ನಡೆಸಿ, ಲಾಕರ್‌ನಲ್ಲಿ ಶೋಧ ನಡೆಸಿದರೂ ಏನೂ ಪತ್ತೆಯಾಗದಿರುವುದು ಸಂತಸ ತಂದಿದೆ. ಎಲ್ಲಾ ದಾಳಿಗಳಲ್ಲಿ ನನ್ನ ಕುಟುಂಬಕ್ಕೆ ಕ್ಲೀನ್‌ಚೀಟ್ ಸಿಕ್ಕಿದೆ ಎಂದು ಗುಡುಗಿದ್ದಾರೆ.
Advertisement
ದಾಳಿಯ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಿಸೋಡಿಯಾ ಪುನರುಚ್ಚರಿಸಿದರು. ಏನೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನನ್ನನ್ನು ಕೆಲವು ತಿಂಗಳು ಜೈಲಿನಲ್ಲಿಡುವಂತೆ ಪ್ರಧಾನಿ ಒತ್ತಡಕ್ಕೆ ಮಣಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ
Advertisement
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ʻಅವರು (ಕೇಂದ್ರ) ಈ ಕೊಳಕು ರಾಜಕೀಯವನ್ನು ಕೊನೆಗೊಳಿಸುತ್ತಾರೆ ಮತ್ತು ನಮಗೆ ಕೆಲಸ ಮಾಡಲು ಅವಕಾಶ ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆʼ ಎಂದು ಕುಟುಕಿದ್ದಾರೆ.
ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.