ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ 4ನೇ ಟಿ 20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತವನ್ನು ಪಾರು ಮಾಡಿದ್ದ ಮನೀಷ್ ಪಾಂಡೆ ಕಳೆದ 6 ಪಂದ್ಯಗಳಲ್ಲಿ ಔಟಾಗಿಲ್ಲ.
ಮನೀಷ್ ಪಾಂಡೆ ಕೊನೆಯ ಬಾರಿಗೆ ಔಟಾಗಿದ್ದು ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ. ಈ ಪಂದ್ಯದಲ್ಲಿ 8 ಎಸೆತ ಎದುರಿಸಿದ ಪಾಂಡೆ 6 ರನ್ ಗಳಿಸಿದ್ದರು. ಕಳೆದ 6 ಇನ್ನಿಂಗ್ಸ್ ಗಳಲ್ಲಿ ಪಾಂಡೆ 133 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್‍ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ
Advertisement
Advertisement
ಹಾಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯದಲ್ಲಿ 14, 14, 50 ರನ್ ಹೊಡೆದಿದ್ದಾರೆ. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಲು ಪಾಂಡೆಗೆ ಅವಕಾಶ ಸಿಕ್ಕಿರಲಿಲ್ಲ.
Advertisement
ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದ ವೇಳೆ 8.4 ಓವರ್ ಗಳಲ್ಲಿ 75 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿದಾಗ ಪಾಂಡೆ ಔಟಾಗದೇ 50 ರನ್(36 ಎಸೆತ, 3 ಬೌಂಡರಿ) ಹೊಡೆದು ತಂಡವನ್ನು ಪಾರು ಮಾಡಿದ್ದರು. 7ನೇ ವಿಕೆಟಿಗೆ ಶಾರ್ದೂಲ್ ಠಾಕೂರ್ ಜೊತೆ 43 ರನ್ ಜೊತೆಯಾಟವಾಡಿದ ಪಾಂಡೆ ಮುರಿಯದ 9ನೇ ವಿಕೆಟಿಗೆ ನವದೀಪ್ ಶೈನಿ ಜೊತೆ 22 ರನ್‍ಗಳ ಜೊತೆಯಾಟವಾಡಿದ್ದರು. ಕೊನೆಯಲ್ಲಿ ವಿಕೆಟ್ ಉಳಿಸಿಕೊಂಡ ಪರಿಣಾಮ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಇದನ್ನೂ ಓದಿ: ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ