ಬಾಲಿವುಡ್‌ನಲ್ಲಿ (Bollywood) ಸದ್ಯ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಸದ್ದಿಲ್ಲದೇ ತೆರೆಮರೆಯಲ್ಲಿ ಲೆಜೆಂಡರಿ ಹೀರೋಯಿನ್ ಮೀನಾ ಕುಮಾರಿ (Meena Kumari) ಜೀವನದ ಕಥೆಯನ್ನ ಸಿನಿಮಾ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ (Manish Malhotra) ಅವರು ಮೊದಲ ಬಾರಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.
ಹಿಂದಿ ಸಿನಿಮಾ ರಂಗದ ಲೆಜೆಂಡರಿ ನಾಯಕಿ ಮೀನಾ ಕುಮಾರಿ ಅವರು ತಮ್ಮ 38ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಸ್ಟಾರ್ ನಟರಿಗೆ ಜೋಡಿಯಾಗಿ ಮೆರೆದಿದ್ದರು. ಮಾಡಿದ್ದು ಕೇವಲ 12 ಸಿನಿಮಾವಾಗಿದ್ರು, ಮೀನಾ ತಮ್ಮ ನಟನೆಯ ಮೂಲಕ ಮೋಡಿ ಮಾಡಿದ್ದರು. ವೈಯಕ್ತಿಕ ಬದುಕಿನಲ್ಲಿ ಸಂಸಾರ ಸಂಕಷ್ಟ ಸೇರಿದಂತೆ ಹಲವು ಕಾರಣಗಳಿಂದ ಕುಡಿತದ ಚಟ ಮೀನಾ ಕುಮಾರಿ ಅವರಿಗಿತ್ತು. ಅದರಿಂದ ದುರಂತ ಅಂತ್ಯ ಕಂಡಿದ್ದರು. ಇದನ್ನೇ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
ಬಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿ ಫೇಮಸ್ ಆಗಿರುವ ಮನೀಷ್ ಮಲ್ಹೋತ್ರಾ ಅವರು ನಿರ್ದೇಶನ ಮಾಡಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಕಥೆ ಕೂಡ ಸಿದ್ಧವಾಗುತ್ತಿದೆ. ಸ್ಕ್ರಿಪ್ಟ್ ವರ್ಕ್ ತೆರೆಮರೆಯಲ್ಲಿ ನಡೆಯುತ್ತಿದೆ. ಹಿರಿಯ ನಟಿ ರೇಖಾ(Rekha) ಅವರ ಸಲಹೆಯ ಮೇರೆಗೆ ಸಿನಿಮಾ ಮಾಡಲು ಮನೀಷ್ ಮುಂದಾಗಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ
ಮೀನಾ ಕುಮಾರಿ ಅವರ ಪಾತ್ರಕ್ಕೆ ಬಾಲಿವುಡ್‌ನ ಪರಮ ಸುಂದರಿ ಕೃತಿ ಸನೋನ್ (Kriti Sanon) ಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಆದರೆ ಮನೀಷ್, ಮೀನಾ ಕುಮಾರಿ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತ ಅಪ್‌ಡೇಟ್‌ಗೆ ಕಾಯಬೇಕಿದೆ. ‘ಆದಿಪುರುಷ್ʼ (Adipurush) ಸಿನಿಮಾದಲ್ಲಿ ಸೀತೆಯಾಗಿ ಕೃತಿ ನಟಿಸಿದ್ದರು. ಈಗ ಮೀನಾ ಕುಮಾರಿಯಾಗಿ ನಟಿಸಲು ಓಕೆ ಎಂದು ಹೇಳ್ತಾರಾ ಕಾದುನೋಡಬೇಕಿದೆ
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]