ಮಹಿಳೆಯನ್ನು ಗುಂಡಿಕ್ಕಿ ಕೊಂದು ಗುರುತು ಸಿಗದಂತೆ ಮುಖ ವಿರೂಪಗೊಳಿಸಿದ್ರು!

Public TV
1 Min Read
MANIPUR POLICE

ಇಂಫಾಲ: ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಣಿಪುರ ಪೊಲೀಸರು (Manipur Police) ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.

ಶನಿವಾರ ಸಂಜೆ ಸುಮಾರು 50 ವರ್ಷದ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಆರೋಪಿಗಳು ಮಹಿಳೆಯನ್ನು ಕೊಲೆಗೈದು ಬಳಿಕ ಆಕೆಯ ಗುರುತು ಸಿಗದಂತೆ ಮುಖವನ್ನು ವಿರೂಪಗೊಳಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಯಾರು, ಯಾವ ಕಾರಣಕ್ಕೆ ಕೊಲೆ ಮಾಡಿದಾರೆ ಎಂದು ತಿಳಿದುಬಂದಿಲ್ಲ.

ಈ ಸಂಬಂಧ ಮಣಿಪುರ ಪೊಲೀಸರು ಟ್ವೀಟ್ ಮಾಡಿ, ಐವರು ಮಹಿಳೆಯರು ಸೇರಿದಂತೆ 9 ಮಂದಿಯನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಈ ಘಟನೆ ಕೀಬಿ ಹೈಕಾಕ್ ಮಾಪಾಲ್ ಮೈನಿಂಗ್ ಚಿಂಗ್ ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಶಸ್ತ್ರಾಸ್ತ್ರಗಳು, ಐದು ಮದ್ದುಗುಂಡುಗಳು ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಸಂತ್ರಸ್ತೆ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಆಕೆಯ ಶವ ಪತ್ತೆಯಾದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯ ಹೇಳಿಕೆಗಳನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದಾರೆ.

Web Stories

Share This Article