ನವದೆಹಲಿ: ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (VBI) ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಕೇಂದ್ರ ಸರ್ಕಾರದ (Union Government) ಶಿಫಾರಸಿನ ಬಳಿಕ ಅಧಿಕೃತವಾಗಿ ದೂರು ದಾಖಲಿಸಿಕೊಂಡಿರುವ ಕೇಂದ್ರೀಯ ತನಿಖಾ ದಳ ತನಿಖೆ ಆರಂಭಿಸಿದೆ.
ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ದೌರ್ಜನ್ಯ ಪ್ರಕರಣದಲ್ಲಿ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ತನಿಖಾ ಸಂಸ್ಥೆ ಈ FIR ದಾಖಲಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದ ನಂತರ ಈ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?
Advertisement
Advertisement
CBI ಸೆಕ್ಷನ್ 153A, 398, 427, 436, 448, 302, 354, 364, 326, 376, 34 ಐಪಿಸಿ ಮತ್ತು 25 (1-C)A ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನ ಈಗಾಗಲೇ ಬಂಧಿಸಲಾಗಿದ್ದು, ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನ್ ಕೂಡ ವಶಪಡಿಸಿಕೊಳ್ಳಲಾಗಿದೆ.
Advertisement
ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸಲಿದ್ದು, ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಅವರನ್ನು ವಿಚಾರಣೆಗೆ ಒಳಪಡಿಸಲಿದೆ. ಬಳಿಕ ಸಂತ್ರಸ್ತರ ಹೇಳಿಕೆಗಳನ್ನ ದಾಖಲಿಸುತ್ತದೆ. ಎಲ್ಲ ಪ್ರಕ್ರಿಯೆ ಬಳಿಕ ಅಪರಾಧ ಸ್ಥಳವನ್ನ ಸಹ ಪರಿಶೀಲಿಸಲಿದೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ - ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಪಾಪಿ ಪ್ರೇಮಿ!
Advertisement
ಮಣಿಪುರದ ವೈರಲ್ ವೀಡಿಯೊದ ತನಿಖೆಯನ್ನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ವಹಿಸಿಕೊಳ್ಳಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಗುರುವಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿತ್ತು. ವಿಚಾರಣೆಯನ್ನು ಮಣಿಪುರದ ಹೊರಗೆ ನಡೆಸಲು ನಿರ್ದೇಶಿಸುವಂತೆ ಅಫಿಡವಿಟ್ ಮೂಲಕ ಮನವಿ ಮಾಡಿತು.
Web Stories