ನವದೆಹಲಿ: ಮಣಿಪುರ ಜನಾಂಗೀಯ ಸಂಘರ್ಷದ (Manipur Violence) ತನಿಖೆಯ ಮೇಲ್ವಿಚಾರಣೆಗೆ ಜಮ್ಮು ಮತ್ತು ಕಾಶ್ಮೀರ (Jammu Kashmir) ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದಲ್ಲಿ ಮೂವರು ಮಹಿಳಾ ಸದಸ್ಯರ ಒಳಗೊಂಡ ನ್ಯಾಯಾಂಗ ಸಮಿತಿಯನ್ನು ಸುಪ್ರೀಂಕೋರ್ಟ್ (Supreme Court) ರಚಿಸಿದೆ.
ಸೋಮವಾರ ಪ್ರಕರಣ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಪೀಠ, ಸಿಬಿಐ ತನಿಖೆಯನ್ನು (CBI Enquiry) ಬದಲಿಸುವುದಿಲ್ಲ ಆದರೆ ಕಾನೂನಿನ ಆಳ್ವಿಕೆಯಲ್ಲಿ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಸಮಿತಿಯೂ ನ್ಯಾ.ಶಾಲಿನಿ ಜೋಶಿ ಮತ್ತು ನ್ಯಾ. ಆಶಾ ಮೆನನ್ ಅವರನ್ನು ಒಳಗೊಂಡಿರುತ್ತದೆ ಎಂದು ತಿಳಿಸಿತು. ಇದನ್ನೂ ಓದಿ: ಜೂನ್‌ನಲ್ಲಿ ರಷ್ಯಾದಿಂದ ಭಾರೀ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿದ ಭಾರತ
ಸಮಿತಿಯೂ ಕೇಂದ್ರೀಯ ತನಿಖಾ ದಳ ಮತ್ತು ಮಣಿಪುರ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಯನ್ನು ಪರಿಶೀಲಿಸಲಿದೆ. ಇದರ ಜೊತೆಗೆ ಪರಿಹಾರ ಮತ್ತು ಪುನರ್ವಸತಿಯನ್ನು ಸೂಚಿಸುವ ವಿಶಾಲ-ಆಧಾರಿತ ಕಾರ್ಯವನ್ನು ಹೊಂದಿರುತ್ತದೆ ಎಂದು ಪೀಠ ಹೇಳಿತು.
ಇದೇ ವೇಳೆ ಪ್ರಕರಣಗಳ ವಿಚಾರಣೆಯನ್ನು ಮಣಿಪುರದ ಹೊರಗಿನ ರಾಜ್ಯಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರಾಕರಿಸಿತು. ಸಿಬಿಐ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ ನಾವು ಅದನ್ನು ಬದಲಿಸುವುದಿಲ್ಲ. ಆದರೆ ಕಾನೂನಿನಲ್ಲಿ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ತನಿಖಾ ಪ್ರಗತಿಯನ್ನು ಮಹಾರಾಷ್ಟ್ರದ ಮಾಜಿ ಡಿಜಿಪಿ ಮತ್ತು ಎನ್ಐಎ ಅಧಿಕಾರಿ ದತ್ತಾತ್ರೇ ಪಡಸಾಲ್ಗಿಕರ್ ಅವರು ವಿಶೇಷವಾಗಿ ಪರಿಶೀಲಿಸುತ್ತಾರೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು. ನ್ಯಾಯಾಂಗ ಸಮಿತಿ ಮತ್ತು ದತ್ತಾತ್ರೇ ಪಡಸಾಲಗಿಕರ್ ಇಬ್ಬರೂ ಪ್ರತ್ಯೇಕ ವರದಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]