ಇಂಫಾಲ್: ಮಣಿಪುರದ ಅಜ್ಟೆಕ್ಸ್ ಸ್ಪೋಟ್ರ್ಸ್ ನಡೆಸಿದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ 24 ವರ್ಷದ ಯುವಕ ಒಂದು ನಿಮಿಷದಲ್ಲಿ 105 ಪುಶ್-ಅಪ್ ಮಾಡುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಮಣಿಪುರದ ತೌನೊಜಮ್ ನಿರಂಜೋಯ್ ಸಿಂಗ್, ಎರಡು ಬಾರಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ಪುಶ್-ಅಪ್‍ಗಳ ದಾಖಲೆ ಬರೆದಿದ್ದು, ಗಿನ್ನೆಸ್ ಬುಕ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 13 ವರ್ಷಗಳ ನಂತರ ಭಾರತೀಯರೊಬ್ಬರು ಈ ದಾಖಲೆಯನ್ನು ಸಾಧಿಸಿದ್ದಾರೆ. ಈ ಸುದ್ದಿ ಕೇಳಿ ಭಾರತೀಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವ್ರಿಗೆ ಮಲೈಕಾ ಖಡಕ್ ಉತ್ತರ
Advertisement
Advertisement
ಯಾರಿದು?
2019 ರಲ್ಲಿ ಸಿಂಗ್ ಒಂದು ನಿಮಿಷದಲ್ಲಿ ಒನ್-ಆರ್ಮ್ ಲೆಗ್ ಪುಶ್-ಅಪ್‍ಗಳ ದಾಖಲೆಯನ್ನು ಮಾಡಿದ್ದರು. ಒಂದು ವರ್ಷದ ನಂತರ, ಮತ್ತೆ ಅವರು ಒಂದು ನಿಮಿಷದಲ್ಲಿ ಒನ್-ಆರ್ಮ್ ಲೆಗ್ ಪುಶ್-ಅಪ್‍ಗಳ ದಾಖಲೆ ಸೃಷ್ಟಿಸಿದ್ದಾರೆ. ಯುಕೆ ಗ್ರಹಾಂ ಮಾಲಿ 2009 ರಿಂದ ಒಂದು ನಿಮಿಷದಲ್ಲಿ ಅತಿ ಹೆಚ್ಚು ಪುಷ್-ಅಪ್‍ಗಳ ದಾಖಲೆಯನ್ನು ಬರೆದಿದ್ದರು. ಆದರೆ ಈಗ ಅವರನ್ನು ಮಣಿಪುರಿ ಯುವಕ ಹಿಂದಿಕ್ಕಿದ್ದಾನೆ.
Advertisement
Manipur's youths are creating history in every Sport!
Congratulations Thounaojam Niranjoy Singh on breaking the Guinness Book of World Records for most push-ups (finger tips) in one minute.
Entire nation is proud of your achievement! pic.twitter.com/cvmFhyhnIa
— Th.Biswajit Singh (@BiswajitThongam) January 15, 2022
Advertisement
ಮಣಿಪುರದ ಯುವಕರನ್ನು ಶ್ಲಾಘಿಸಿ, ಭಾರತದ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ, ಅತಿ ಹೆಚ್ಚು ಪುಷ್-ಅಪ್ ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ದಾಖಲೆ ಮಾಡಿದ ಮಣಿಪುರಿ ಯುವಕ ಟಿ.ನಿರಂಜೋಯ್ ಸಿಂಗ್ ಅಭಿನಂದನೆಗಳು. ಇದು ಅದ್ಭುತವಾಗಿದೆ. ನಿಮ್ಮ ಸಾಧನೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅವಧಿ ಮೀರಿ ವಾಸಗೃಹದಿಂದ ಕುಟುಂಬ ಹೊರಹಾಕಿದ್ದ ಪ್ರಕರಣ ಸುಖಾಂತ್ಯ – ಮೃತ ನೌಕರನ ಪುತ್ರನಿಗೆ ಗುತ್ತಿಗೆ ನೌಕರಿ
Amazing to see unbelievable power of Manipuri youth T. Niranjoy Singh who broke the Guinness Book of World Records for most push-ups (finger tips) in one minute ????
I'm so proud of his achievement !! pic.twitter.com/r1yT0ePn3f
— Kiren Rijiju (@KirenRijiju) January 22, 2022
ಹಲವಾರು ರಾಜಕಾರಣಿಗಳು, ಫಿಟ್ನೆಸ್ ಉತ್ಸಾಹಿಗಳು ಮತ್ತು ನೆಟ್ಟಿಗರು ಸಿಂಗ್ ದೇಶಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.