75 ವರ್ಷದ ಬಳಿಕ ಮಣಿಪುರಕ್ಕೆ ಆಗಮಿಸಿತು ಗೂಡ್ಸ್‌ ರೈಲು

Public TV
1 Min Read
Manipur goods train

ಇಂಫಾಲ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಬಳಿಕ ಮಣಿಪುರಕ್ಕೆ(Manipur) ಗೂಡ್ಸ್‌ ರೈಲು(Goods Train) ಆಗಮನವಾಗಿದೆ.

ಅಸ್ಸಾಂನ ಸಿಲ್ಚಾರ್‌ನಿಂದ ಪ್ರಯಾಣಿಕ ರೈಲು ಮಣಿಪುರದ ಬೊಂಗೈಚುಂಗ್‌ಪಾವೊ ರೈಲು ನಿಲ್ದಾಣವನ್ನು ತಲುಪಿದ ನಂತರ ಸರಕು ರೈಲು ಈಶಾನ್ಯ ರಾಜ್ಯದ ರಾಣಿ ಗೈಡಿನ್ಲಿಯು ನಿಲ್ದಾಣಕ್ಕೆ ಆಗಮಿಸಿದೆ.  ಇದನ್ನೂ ಓದಿ: ಅಮೆರಿಕದಲ್ಲಿ ಭಾರಿ ಹಿಮಪಾತದ ಸುಳಿವು – ನ್ಯೂಯಾರ್ಕ್ ಸೇರಿ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

ಈಶಾನ್ಯ ಭಾಗದಲ್ಲಿ ಅಭಿವೃದ್ಧಿಯ ಪರ್ವ ಮುಂದುವರಿದಿದೆ. ಮೊದಲ ಸರಕು ಸಾಗಣೆ ರೈಲು ಮಣಿಪುರವನ್ನು ತಲುಪಿದೆ. ಅಲ್ಲಿಂದ ಸರಕುಗಳು ದೇಶದ ಎಲ್ಲಾ ಭಾಗಗಳಿಗೆ ತಲುಪುವುದರಿಂದ ರಾಜ್ಯದ ವಾಣಿಜ್ಯ ಮತ್ತು ಸಂಪರ್ಕವನ್ನು ಇದು ವರ್ಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ತಿಂಗಳ ಆರಂಭದಲ್ಲಿ ಮಣಿಪುರದಲ್ಲಿ ಹೊಸ ಜಿರಿಬಾಮ್-ಇಂಫಾಲ್ ರೈಲು ಯೋಜನೆಯ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದರು. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

ದೇಶದ ಅತಿ ಉದ್ದದ ರೈಲು ಸುರಂಗವನ್ನು ಒಳಗೊಂಡಿರುವ ಯೋಜನೆಯು ಇಂಫಾಲನ್ನು ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಈಶಾನ್ಯದಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳಿಗೆ ಈ ವರ್ಷ 7,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

60 ವಿಧಾನಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆ.27, ಮಾ.3 ರಂದು ಚುನಾವಣೆ ನಡೆಯಲಿದ್ದು ಮಾ.10 ರಂದು ಫಲಿತಾಂಶ ಪ್ರಕಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *