ನವದೆಹಲಿ: ಮಣಿಪುರದ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ನೆರೆ ಸಂತ್ರಸ್ತ ಪರಿಹಾರ ಕಾರ್ಯದಲ್ಲಿ ಸ್ವತಃ ತಾವೇ ಸೊಂಟದವರೆಗಿನ ನೀರಿಗಿಳಿದು ಸಾರ್ವಜನಿಕರ ರಕ್ಷಣೆಗೆ ಮುಂದಾಗಿದ್ದರು. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸತತ 48 ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಮಣಿಪುರದ ಇಂಫಾಲ್ ನಲ್ಲಿ ಜನವಾಸ ಸ್ಥಳಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ನೆರೆ ಪರಿಹಾರ ಕಾರ್ಯಕ್ಕೆ ಸ್ವತಃ ನೆರೆ ನಿಯಂತ್ರಣ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ಅವರಿಗೆ ಸೊಂಟದವರಿಗೆ ನೀರಿತ್ತು. ಈ ನೀರಿಗಿಳಿದು ಜನರ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು.
Advertisement
ಸಿಂಗ್ ಅವರ ಈ ಕಾರ್ಯವನ್ನು ಸ್ವತಃ ವೀಕ್ಷಿಸುತ್ತಿದ್ದ ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ದಿಲೀಪ್ ಸಿಂಗ್ ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿರುವ ಈ ಫೋಟೊ ಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದರು. ಹೀಗಾಗಿ ಸದ್ಯ ಐಎಎಸ್ ಅಧಿಕಾರಿ ನೀರಿಗಿಳಿದು ರಕ್ಷಣೆ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ದೇಶದಾದ್ಯಂತ ಅವರ ಈ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಗಳ ಹೊಳೆಯೇ ಹರಿದುಬರುತ್ತಿದೆ.
Advertisement
Flood situation becoming bad to worse all over the State. Ministers, MLAs, Chief Secretary, DG, IAS officers, security forces, personal of all Departments and CSOs, all are involved in facing the calamity from dawn to dusk and still goin on. @PMOIndia @rammadhavbjp @RajatSethi86 pic.twitter.com/OOdM520fcS
— N.Biren Singh (@NBirenSingh) June 13, 2018
Advertisement
ದಿಲೀಪ್ ಸಿಂಗ್ ಈ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ದೇಶಕ್ಕೆ ಇಂತಹ ಅಧಿಕಾರಿಗಳು ಬೇಕು. ಇವರು ಯುವಕರಿಗೆ ಮಾದರಿಯಾಗಿದ್ದಾರೆ ಅಂತಾ ಟ್ವೀಟ್ ಮಾಡುವ ಮೂಲಕ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Advertisement
Wow……an example for great leadership. May your tribe increase Mr. Deleep Singh. https://t.co/HhO434MAtr
— Jai Nethala (@jainethala) June 14, 2018
Pictures of IAS officer Deleep Singh along within Water Resources Minister Letpao Haokip get into waist deep water to spearhead flood relief efforts in Manipur are storming the net. if these arent heroes, then who are?#UnitedByCulture #humanity pic.twitter.com/xj8gUpo8q6
— Geetika Swami (@SwamiGeetika) June 14, 2018