ನವದೆಹಲಿ: ಬಿಜೆಪಿಯು ಈಶಾನ್ಯ ಭಾರತದವರ ಜೀವನ ಶೈಲಿಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದಾಗಿ ತಾರತಮ್ಯ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
ಮಣಿಪುರದಲ್ಲಿ ವರ್ಚುವಲ್ ಪ್ರಚಾರದಲ್ಲಿ ಮಾತನಾಡಿದ ಅವರು, ಅಸ್ಸಾಂ ಬಿಜೆಪಿ ಮತ್ತು ಅದರ ವಿವಿಧ ಸಂಘಟನೆಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ದೂರು ನೀಡಿದ್ದರ ಬಗ್ಗೆ ಕೌಂಟರ್ ನೀಡಿದರು. ಬಿಜೆಪಿ ಬಿಜೆಪಿಯು ರಾಜ್ಯಗಳ ಒಕ್ಕೂಟ ಹಾಗೂ ವೈವಿಧ್ಯತೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ದೇಶದ ಎಲ್ಲಾ ರಾಜ್ಯಗಳು ಸಮಾನತೆಯನ್ನು ಹೊಂದಿರುವ ಅಖಂಡ ರಾಷ್ಟ್ರವೆನಿಸಿಕೊಂಡಿದೆ. ಆದರೆ ಈಶಾನ್ಯ ಭಾಗಕ್ಕೆ ಬಂದರೆ ಬಿಜೆಪಿಗೆ ಏಕರೂಪತೆಯ ಕಲ್ಪನೆಯಿದೆ ಎಂದು ಕಿಡಿಕಾರಿದರು.
Advertisement
Advertisement
ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ನಮ್ಮ ಸಂಪ್ರದಾಯಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಿದೆ. ಇದರಿಂದಾಗಿ ಮಣಿಪುರ ಅಭಿವೃದ್ಧಿಯಾಗಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು
Advertisement
Advertisement
ನಮಗೆ ಸಂವಿಧಾನದ ಪೀಠಿಕೆಯ ಮೇಲೆ ನಂಬಿಕೆಯಿದೆ. ಅದರನ್ವಯದಂತೆ ಮಣಿಪುರದ ಪ್ರಾದೇಶಿಕ ಸಮಗ್ರತೆ ಮತ್ತು ಅದರ ಐತಿಹಾಸಿಕ ಗಡಿಗಳನ್ನು ಭದ್ರಪಡಿಸುತ್ತೇವೆ. ಜೊತೆಗೆ ನಾಗರಿಕ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುಳ್ಳು ಭರವಸೆಗಳನ್ನು ಕೇಳಬೇಕಿದ್ದರೆ ಮೋದಿ, ಕೇಜ್ರಿವಾಲ್ ಮಾತು ಕೇಳಿ: ರಾಹುಲ್ ಗಾಂಧಿ