ಇಂಫಾಲ್: ಮಣಿಪುರದ ಸರ್ಕಾರಿ ಕಚೇರಿಗಳಿಗೆ ವಾರದ ಐದು ದಿನಗಳು ಮಾತ್ರ ಕೆಲಸ ದಿನವಾಗಿ ಘೋಷಿಸಿದ್ದು, ಇದರ ಹೊರೆ ಅಗತ್ಯ ಸೇವೆಗಳ ಮೇಲೆ ಬೀಳದಂತೆ ಕೆಲಸದ ಸಮವನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್. ಬಿರೇನ್ ಸಿಂಗ್ ಅವರು ಮೊದಲ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಸಮಯ ಬದಲಾವಣೆಗೊಂಡಿದ್ದು, ಬೆಳಗ್ಗೆ 9ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಇದರ ಜೊತಗೆ ಶಾಲೆಯ ಸಮಯವನ್ನು ಬದಲಾವಣೆ ಮಾಡಲಾಗಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ನಿರ್ಧಾರವನ್ನು ಕೈಗೊಂಡಿದ್ದು, ಬೆಳಗ್ಗೆ 8 ಗಂಟೆಗೆ ಎಲ್ಲಾ ತರಗತಿಗಳು ಪ್ರಾರಂಭವಾಗುತ್ತವೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಸಮಯ ಸಾಕಷ್ಟು ಸಮಯ ದೊರೆಯುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್
ಹೊಸ ಅಸೆಂಬ್ಲಿಯ ಮೊದಲ ಅಧಿವೇಶನವನ್ನು ಕರೆಯಲು ಮತ್ತು ಮಾರ್ಚ್ 24ರಂದು ಸ್ಪೀಕರ್ ಚುನಾವಣೆಯನ್ನು ನಿಗದಿಪಡಿಸಲು ರಾಜ್ಯಪಾಲರನ್ನು ಕ್ಯಾಬಿನೆಟ್ ವಿನಂತಿಸಿತು. ನಿರ್ಮಾಣ ಕಾರ್ಯಗಳು ಸೇರಿದಂತೆ 100 ದಿನಗಳಲ್ಲಿ 100 ಕಾರ್ಯಗಳ ಕಾರ್ಯಕ್ರಮವನ್ನು ತಿಳಿಸಿದರು. ಇದನ್ನೂ ಓದಿ: ಹೀರೋ ಮೋಟೋಕಾರ್ಪ್ ಎಂಡಿ ಕಚೇರಿ, ನಿವಾಸದ ಮೇಲೆ ಐಟಿ ರೇಡ್!