ಉಡುಪಿ: ನಿಯಮ ಮೀರಿ ಕರ್ಕಶ ಸದ್ದು ಮಾಡಿದ ದುಬೈ ನೋಂದಣಿಯ ಕಾರುಗಳನ್ನು ವಶಕ್ಕೆ ಪಡೆದ ಮಣಿಪಾಲ (Manipal) ಪೊಲೀಸರು, 1,500 ರೂ. ದಂಡ ವಿಧಿಸಿದ್ದಾರೆ.
Advertisement
ದುಬೈನಲ್ಲಿ (Dubai) ವಾಸವಿರುವ ಕೇರಳ ಮೂಲದ ಸುಲೈಮನ್ ಮೊಹಮ್ಮದ್ (29), ಮೊಹಮ್ಮದ್ ಶರೀಫ್ (27) ಮತ್ತು ಅಬ್ದುಲ್ ನಜೀರ್ (25) ಎಂಬ ಯುವಕರು ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ರಸ್ತೆಯಲ್ಲಿ ನಿಯಮ ಮೀರಿ ಓಡಾಟ ನಡೆಸಿದ್ದ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದರೆ ಕರ್ಕೊಂಡು ಹೋಗಲಿ ನೋಡೋಣ – ಜಮೀರ್‌ಗೆ ಅಶ್ವಥ್ ನಾರಾಯಣ್ ಸವಾಲು
Advertisement
Advertisement
ಆರು ತಿಂಗಳು ಭಾರತದಲ್ಲಿ ತಿರುಗಾಡಲು ಕಾರುಗಳನ್ನು, ಸಮುದ್ರದ ಮುಖಾಂತರ ಹಡಗಿನಲ್ಲಿ ಆಮದು ಮಾಡಿಕೊಂಡಿದ್ದರು. ದುಬೈ ದೇಶಕ್ಕೆ 30 ಲಕ್ಷ ರೂ. ಹಾಗೂ ಭಾರತಕ್ಕೆ 1 ಕೋಟಿ ರೂ. ಹಣ ಕಟ್ಟಿರುವುದಾಗಿ ಪೊಲೀಸರ ಬಳಿ ಯುವಕರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೇಯಾ ಘೋಷಾಲ್ ಎಕ್ಸ್ ಅಕೌಂಟ್ ಹ್ಯಾಕ್: ಲಿಂಕ್ ಕ್ಲಿಕ್ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ
Advertisement
ಕಾರುಗಳ ದಾಖಲೆಗಳನ್ನ ಆರ್‌ಟಿಓಗೆ ಕಳುಹಿಸಿದ ಪೊಲೀಸರು, ದುಬೈ ನೋಂದಣಿ ಕಾರು ಓಡಾಟಕ್ಕೆ ಅನುಮತಿ ಇದೆಯೇ ಎಂದು ಪರಿಶೀಲನೆ ನಡೆಸಿದರು. ಕಾರು ಚಲಾಯಿಸುವ ಅನುಮತಿ ಇರುವ ಹಿನ್ನೆಲೆ ಆರ್‌ಟಿಓ ಅನುಮತಿ ಮೇರೆಗೆ ಕರ್ಕಶ ಶಬ್ದ ಮಾಡಿದ 3 ಕಾರುಗಳ ಮೇಲೆ 1,500 ರೂ. ಫೈನ್ ಹಾಕಿ ಕಳುಹಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತ – ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವು