ಬೆಂಗಳೂರು: ಅತ್ಯಾಚಾರ ಕೇಸಲ್ಲಿ ಎಸ್‍ಐಟಿ (SIT) ಅಧಿಕಾರಿಗಳ ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ತನಿಖೆ ಚುರುಕುಗೊಂಡಿದೆ. ಗುರುವಾರ ಕಸ್ಟಡಿ ಅಂತ್ಯವಾಗಲಿದ್ದು, ಇಂದು ಪ್ರಜ್ವಲ್ ರೇವಣ್ಣಗೆ ಕೋರ್ಟ್ ಅನುಮತಿ ಪಡೆದು ಪುರುಷತ್ವ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆ ನಡೆಸಲಾಗಿದೆ.
ಪ್ರಕರಣ ಸಂಬಂಧ ತನಿಖೆ ನಡಸಿರುವ ಅಧಿಕಾರಿಗಳು, ಮೊನ್ನೆಯೇ ಪುರುಷತ್ವ ಪರೀಕ್ಷೆ ಗೆ ಮುಂದಾಗಿದ್ರು. ಆದರೆ ಈ ಪರೀಕ್ಷೆ ನಡೆಸಲು ಕೋರ್ಟ್ ನ ಅನುಮತಿ ಕಡ್ಡಾಯವಾಗಿರೋ ಹಿನ್ನೆಲೆಯಲ್ಲಿ, ನಿನ್ನೆ ಮತ್ತೆ ಕೋರ್ಟ್ ಮೊರೆ ಹೋದ ಅಧಿಕಾರಿಗಳು ಅಗತ್ಯವಿರುವ ಅನುಮತಿ ಪಡೆದಿದ್ರು. ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಶಿವಾಜಿ ವಾಜಪೇಯಿ ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋದ ಅಧಿಕಾರಿಗಳು ಸಂಜೆ 5 ಗಂಟೆ ತನಕ ಪುರುಷತ್ವ ಪರೀಕ್ಷೆ ಸೇರಿದಂತೆ ತನಿಖೆಗೆ ಅಗತ್ಯ ವಿರುವ ಹಲವು ಪರೀಕ್ಷೆಗಳನ್ನು ನಡೆಸಿದ್ರು.
Advertisement
Advertisement
ಆರೋಪಿ ಪ್ರಜ್ವಲ್ ರೇವಣ್ಣನನ್ನು 6 ದಿನಗಳಿಂದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಹೈರಾಣಾಗಿದ್ದಾರೆ. ಪ್ರಕರಣ ಸಂಬಂಧ ಯಾವುದೇ ಪ್ರಶ್ನೆ ಕೇಳಿದ್ರು ರೆಡಿಮೇಟ್ ಉತ್ತರ ಕೊಡ್ತಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಟೆಕ್ನಿಕಲ್ ಆಗಿ ಆರೋಪವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದು, ಅದರ ಭಾಗವಾಗಿ ಇಂದು ಪುರುಷತ್ವ ಪರೀಕ್ಷೆ ನಡೆಸಿದ್ದಾರೆ. ಸ್ಥಳ ಮಹಜರು ಸೇರಿದಂತೆ ಇನ್ನೂ ಬಹಳಷ್ಟು ಪ್ರಕ್ರಿಯೆಗಳು ಬಾಕಿ ಇದೆ. ಈ ಬೆನ್ನಲ್ಲೇ ನಾಳೆಗೆ ಪ್ರಜ್ವಲ್ ಕಸ್ಟಡಿ ಅಂತ್ಯವಾಗಲಿದ್ದು, ವಿಚಾರಣೆ ವೇಳೆ ಆರೋಪಿಯ ಅಸಹಕಾರ ಬಾಕಿ ಇರುವ ಪ್ರಕ್ರಿಯೆಗಳನ್ನು ಕೋರ್ಟ್ ಗಮನಕ್ಕೆ ತಂದು ಮತ್ತೆ ಕಸ್ಡಡಿಗೆ ಕೇಳಲು ಎಸ್ ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
Advertisement
ಒಂದು ವೇಳೆ ಕೋರ್ಟ್ ನಲ್ಲಿ ಮತ್ತೆ ಕಸ್ಟಡಿ ನೀಡದೇ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ರೆ, ಇನ್ನೂ ಎರಡು ಪ್ರಕರಣಗಳ ತನಿಖೆ ಬಾಕಿಯಿದ್ದು ಆ ಪ್ರಕರಣಗಳಲ್ಲಿ ಒಂದರಲ್ಲಿ ಬಂಧನ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ.
Advertisement
ಈ ಮಧ್ಯೆ ಪೆನ್‍ಡ್ರೈವ್ ಹಂಚಿಕೆ ಪ್ರಕರಣದ ಆರೋಪಿಗಳಾದ ಕಾರ್ತಿಕ್ ಮತ್ತು ಪುಟ್ಟಿ ಅಲಿಯಾಸ್ ಪುಟ್ಟರಾಜು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ.ಬಂಧನ ಭೀತಿಯಿಂದ ಕಾರ್ತಿಕ್ ಗೌಡ, ಪುಟ್ಟಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.