ಹುಬ್ಬಳ್ಳಿ: ಮ್ಯಾನಹೋಲ್‍ಗಳಲ್ಲಿ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಬಾರದು ಎಂಬ ನಿಯಮ ಇದೆ. ಆದ್ರೆ ಆ ನಿಯಮವನ್ನೇ ಗಾಳಿಗೆ ತೂರಿ ಹುಬ್ಬಳ್ಳಿಯಲ್ಲಿ ಬಾಲಕನೊಬ್ಬನನ್ನು ಮ್ಯಾನಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ ಘಟನೆ ನಡೆದಿದೆ.
ಹೌದು. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಮ್ಯಾನಹೋಲ್‍ನಲ್ಲಿ ಕಿರಣ್ ಎಂಬ ಹುಡುಗನನ್ನು ಕೆಳಗೆ ಇಳಿಸಿ ಸ್ವಚ್ಛತೆ ಮಾಡಿಸಿದ್ದಾರೆ.
Advertisement
Advertisement
ಚನ್ನಮ್ಮ ವೃತ್ತದಲ್ಲಿನ ಯುಜಿಡಿ (ಒಳ ಚರಂಡಿ ವ್ಯವಸ್ಥೆ) ತುಂಬಿಕೊಂಡಿದ್ದು, ಇದೇ ವೃತ್ತದಲ್ಲಿ ಸಾರ್ವಜನಿಕ ಶೌಚಾಲಯವೊಂದು ದುರಸ್ತಿಗೊಂಡಿದೆ. ಹೀಗಾಗಿ ಶೌಚಾಲಯ ಗುತ್ತಿಗೆ ಪಡೆದ ಗುತ್ತಿಗೆದಾರ, ಕಿರಣ್‍ನನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.
Advertisement
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ತವರಲ್ಲೇ ನಡೆದಿದೆ ರಾಜ್ಯದ ಮಾನ ಹೋಗೋ ಘಟನೆ
Advertisement
ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಳಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಅತ್ಯಾಧುನಿಕ ಯಂತ್ರಗಳಿದ್ರೂ ಈ ರೀತಿ ಕಾರ್ಮಿಕರನ್ನು ಬಳಸಿ ಕ್ಲೀನ್ ಮಾಡಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ 3 ಕಾರ್ಮಿಕರ ಸಾವು
https://youtu.be/kcFSaXt6CH8
https://youtu.be/xkvU06jGuCU