ರಾಮನಗರ: ಭೀಕರ ಬರಗಾಲದಿಂದ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು (Mangoes) ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 400ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಇತ್ತ ಹಾಕಿದ ಬಂಡವಾಳವೂ ಇಲ್ಲದೇ, ಹತ್ತಾರು ವರ್ಷಗಳಿಂದ ಬೆಳೆದಿದ್ದ ಮರಗಳೂ ಉಳಿಯದೇ ರೈತರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ.
ರೇಷ್ಮೆನಗರಿ ಎಂದು ಬಿರುದು ಪಡೆದ ರಾಮನಗರ (Ramanagar) ಹಣ್ಣಿನ ರಾಜ ಮಾವು ಬೆಳೆಯುವಲ್ಲೂ ಹೆಸರು ಮಾಡಿದೆ. ರಾಜ್ಯದಲ್ಲಿ ಮಾವಿನ ಸೀಸನ್ ಶುರುವಾಗೋದು ಇಲ್ಲಿಂದಲೇ. ಅತ್ಯಂತ ಉತ್ಕೃಷ್ಟ ಹಾಗೂ ವಿವಿಧ ತಳಿಯ ಮಾವನ್ನು ವಿದೇಶಕ್ಕೆ ರಫ್ತು ಮಾಡುವ ಇತಿಹಾಸ ಈ ಜಿಲ್ಲೆಗಿದೆ. ಈ ಬಾರಿ ಮಾವು ಬೆಳೆಯ ಇತಿಹಾಸದಲ್ಲೇ ಕಂಡು ಕೇಳರಿಯದ ಬರದಿಂದ ಮಾವು ಬೆಳೆ ನೆಲಕಚ್ಚಿದೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟ ಗೆದ್ದರೇ ಮರುದಿನವೇ ಜೈಲಿನಿಂದ ಹೊರಬರುವೆ: ಕೇಜ್ರಿವಾಲ್
Advertisement
Advertisement
ಸೀಸನ್‍ನಲ್ಲಿ ಸುಮಾರು 2 ಲಕ್ಷದ 50 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆ ಆಗುತ್ತಿದ್ದ ಮಾವು ಈ ಬಾರಿ ಕೆಲವೇ ಕೆಲವು ಟನ್‍ಗಳಿಗೆ ಮಾತ್ರ ಸೀಮಿತವಾಗಿದೆ. ಮಾವು ಬೆಳೆದ ರೈತರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
Advertisement
ತಾಪಮಾನ ಏರಿಕೆಯಿಂದಾಗಿ ಮರದಲ್ಲಿ ಕಾಯಿಗಟ್ಟ ಬೇಕಿದ್ದ ಹೂಗಳು, ಸಣ್ಣ ಕಾಯಿಗಳು ಬಿಸಿಲಿನ ಝಳಕ್ಕೆ ಉದುರಿ ಹೋಗುತ್ತಿವೆ. ಜೊತೆಗೆ ಕೀಟಗಳ ಸಮಸ್ಯೆ ಸಹ ಮಾವಿಗೆ ಆವರಿಸಿದೆ.
ಜಿಲ್ಲೆಯಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಮಾವು ಬೆಳೆಯಲಾಗುತ್ತಿದೆ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿನ ತೀವ್ರ ತಾಪಮಾನದಿಂದ ಹೂಗಳೆಲ್ಲ ಉದುರಿ 90% ಇಳುವರಿ ಕುಸಿದಿದ್ದು 10% ರಷ್ಟು ಮಾತ್ರ ಇಳುವರಿಯಾಗಿದೆ. ಅದೂ ಕೂಡಾ ಬಿಸಿಲಿಗೆ ಒಣಗಿ ಗುಣಮಟ್ಟ ಕಳೆದುಕೊಂಡಿದ್ದು, ಮಾರುಕಟ್ಟೆಯಲ್ಲೂ ಕೊಂಡುಕೊಳ್ಳುವವರಿಲ್ಲದೇ ಬೇಡಿಕೆ ಕುಸಿತ ಕಂಡಿದೆ. ಈ ಬಗ್ಗೆ ಸಮೀಕ್ಷೆ ಮಾಡಿರುವ ಜಿಲ್ಲಾಡಳಿತ 400ಕೋಟಿ ರೂ. ಮೌಲ್ಯದ ಮಾವು ಬೆಳೆ ನಾಶ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇನ್ನೂ ಮಾವು ಬೆಳೆಗೆ ವಿಮೆ ನೀಡಲು ವಿಮಾ ಕಂಪನಿಗಳು ಹಿಂದೇಟು ಹಾಕಿವೆ. ಉಷ್ಣಾಂಶದಿಂದ ಬೆಳೆ ನಾಶವಾಗಿರೋದಕ್ಕೆ ವಿಮೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿರುವುದು ಮಾವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಕೇಸ್- ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು