ಬೆಂಗಳೂರು: ಮೇ 26 ರಿಂದ ಜೂನ್ 4 ರವರೆಗೆ ಹಾಪ್‌ಕಾಮ್ಸ್‌ನಲ್ಲಿ (HOPCOMS) ಮಾವು ಹಾಗೂ ಹಲಸು ಮೇಳವನ್ನು (Mango Jackfruit Fair) ಆಯೋಜಿಸಲಾಗಿದೆ.
ಮಾವು ಹಾಗೂ ಹಲಸು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರೋತ್ಸಾಹ ನೀಡುವುದರ ನಿಟ್ಟಿನಲ್ಲಿ ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇ 26 ರಿಂದ ಜೂನ್ 4 ರವರೆಗೂ ಗ್ರಾಹಕರು ರಿಯಾಯಿತಿ ದರದಲ್ಲಿ ಮಾವು ಹಾಗೂ ಹಲಸನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಾವು, ಹಲಸು ಹಂಗಾಮು ಮುಗಿಯುವವರೆಗೂ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೇಳ ನಡೆಯಲಿದೆ. ಮೇಳದಲ್ಲಿ ಆಲೋನ್ಸ್, ರಸಪುರಿ, ಸೇಂದೂರ, ಮಲಗೋವಾ, ಮಲ್ಲಿಕಾ, ಬಂಗನ ಪಲ್ಲಿ (ಬೇನಿಷಾ), ದರೇರಿ, ಕಾಲಪಾಡು, ಕೇಸರ್, ನೀಲಂ, ತೋತಾಪುರಿ, ಇಮಾಂಪಸಂದ್ ತಳಿಯ ಮಾವು ಮತ್ತು ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಲಸು ಸಿಗಲಿದೆ. ಇದನ್ನೂ ಓದಿ: ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಪಕ್ಷಗಳ ಬಹಿಷ್ಕಾರ – ಭಾಗವಹಿಸುತ್ತೇವೆ ಎಂದ 2 ಪಕ್ಷಗಳು
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಲಾಲ್‌ಬಾಗ್ ಸಮೀಪದ ಹಾಪ್‌ಕಾಮ್ಸ್ ಕೇಂದ್ರ ಕಚೇರಿಯಲ್ಲಿ ಮಾವು ಹಾಗೂ ಹಲಸಿನ ಮೇಳ ಉದ್ಘಾಟನೆಯಾಗಲಿದೆ. ಇದನ್ನೂ ಓದಿ: ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್