ಮೀನೂಟ ಕರ್ನಾಟಕದ ಕರಾವಳಿ, ಮಲೆನಾಡು ಜನರ ನೆಚ್ಚಿನ ಖಾದ್ಯವಾಗಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಮೀನಿನ ಸಾಂಬರ್ ಮಾಡುತ್ತಾರೆ. ಆದ್ರೆ ಆಂಧ್ರ, ತೆಲಂಗಾಣದಂತಹ ರಾಜ್ಯಗಳಲ್ಲಿ ಇನ್ನೂ ಬಗೆಬಗೆಯ ತಿನಿಸುಗಳನ್ನು ಮೀನಿನಿದಲೇ ತಯಾರಿಸುತ್ತಾರೆ. ಫಿಶ್ ಕರಿ, ಫಿಶ್ ಸೂಪ್, ನೆಲ್ಲೂರು ಮೀನ್ ಸೂಪ್ ಇಂದಿಗೂ ಕೂಡ ಫೇಮಸ್, ಮೀನು ಪ್ರಿಯರು ಹೋಟೆಲ್‌ಗಳನ್ನ ಹುಡುಕಿಕೊಂಡು ಹೋಗಿ ತಿಂತಾರೆ. ಆದ್ರೆ ಇದ್ರಲ್ಲಿ ಅತಿಹೆಚ್ಚು ಫೇಮಸ್ ಆಗಿರೋದು ಮ್ಯಾಂಗೋ ಫಿಶ್ ಸೂಪ್. ಅದಕ್ಕಾಗಿ ನೀವು ಆಂಧ್ರ, ತೆಲಂಗಾಣಕ್ಕೆ ಹೋಗಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾಗಿದೆ. ಅದು ಹೇಗೆ ಅನ್ನೋದನ್ನ ಮುಂದೆ ನೋಡಿ…
ಬೇಕಾಗುವ ಸಾಮಗ್ರಿಗಳು:
* ಮೀನಿನ ಪೀಸು – 8 ರಿಂದ 10
* ರೆಡ್ ಚಿಲ್ಲಿಪೌಡರ್ – 1 ಚಮಚ
* ಅರಿಶಿನ – 1 ಚಮಚ
* ಉಪ್ಪು – ಅಗತ್ಯಕ್ಕೆ ತಕ್ಕಷ್ಟು
* ದನಿಯಾ – 1 ಚಮಚ
* ಸಾಸಿವೆ – 1 ಚಮಚ
* ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
* ಕರಿಬೇವು – 8-10 ಎಲೆಗಳು
* ಈರುಳ್ಳಿ – 1 (ತೆಳುವಾಗಿ ಕತ್ತರಿಸಬೇಕು)
* ಹಸಿಮೆಣಸಿನಕಾಯಿ – 2-3 (ಉದ್ದಕ್ಕೆ ಕತ್ತರಿಸಿ)
* ಟೊಮೆಟೊ – 1 (ಚೌಕವಾಗಿ ಕತ್ತರಿಸಿ)
* ಹಸಿ ಮಾವಿನಕಾಯಿ – 1 (ಸಿಪ್ಪೆಯೊಂದಿಗೆ ಕತ್ತರಿಸಿ)
* ಹುಣಸೆ ರಸ – 2 ಚಮಚ
* ಕೊತ್ತಂಬರಿ – ಅಲಂಕಾರಕ್ಕಾಗಿ ಸ್ವಲ್ಪ
* ಕೆಂಪು ಮೆಣಸಿನಕಾಯಿ – 1 ಚಮಚ
* ಅರಿಶಿನ – 1 ಚಮಚ
ಮಾವಿನಕಾಯಿ ಫಿಶ್ ಸೂಪ್ ಮಾಡುವ ವಿಧಾನ
* ಮೊದಲು, ಮೀನಿನ ತುಂಡುಗಳನ್ನ ತೊಳೆದು ಅದಕ್ಕೆ ಮಸಾಲೆ ಪದಾರ್ಥಗಳನ್ನ ಸೇರಿಸಿ, 15 ನಿಮಿಷಗಳ ಕಾಲ ಒಣಗಲು ಬಿಡಿ.
* ಕೊತ್ತಂಬರಿ ಸೊಪ್ಪು ಮತ್ತು ಮೆಂತ್ಯವನ್ನ ಬಾಣಲೆಯಲ್ಲಿ 2 ನಿಮಿಷಗಳ ಕಾಲ ಹುರಿಯಿರಿ ಬಳಿಕ ಅದನ್ನ ತಣ್ಣಗಾಗಲು ಬಿಡಿ, ತಣ್ಣಗಾದ ಮೇಲೆ ನುಣ್ಣಗೆ ಪುಡಿ ಮಾಡಿ.
* ಈಗ ಬಾಣಲೆಯಲ್ಲಿ ಎಣ್ಣೆಯನ್ನ ಬಿಸಿ ಮಾಡಿ ಸಾಸಿವೆ ಮತ್ತು ಜೀರಿಗೆ ಸೇರಿಸಿ ಮತ್ತು ಅವು ಸಿಡಿಯುವಾಗ, ಕರಿಬೇವು ಹಾಕಿ ಹುರಿಯಿರಿ.
* ನಂತ್ರ ಹಸಿರು ಮೆಣಸಿನಕಾಯಿ, ಈರುಳ್ಳಿ ಸೇರಿಸಿ ಅದು ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
* ನಂತರ ಟೊಮ್ಯಾಟೊ ಸೇರಿಸಿ 3 ನಿಮಿಷಗಳ ಕಾಲ ಕುದಿಯಲು ಬಿಡಿ.
* ಈಗ ಮಾವಿನಕಾಯಿ ತುಂಡುಗಳನ್ನ ಅದಕ್ಕೆ ಹಾಕಿ 2 ನಿಮಿಷಗಳ ಕಾಲ ಮುಚ್ಚಿ ಬೇಯಲು ಬಿಡಿ.
* ನಂತರ ಉಪ್ಪು, ಮೆಣಸಿನ ಪುಡಿ, ಅರಿಶಿನ, ಮೆಂತ್ಯ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಹುಣಸೆ ರಸವನ್ನ ಸೇರಿಸಿ, ಇನ್ನೂ 4-5 ನಿಮಿಷಗಳ ಕಾಲ ಕುದಿಸಿ.
* ಕೊನೆಯಲ್ಲಿ, ಮೀನಿನ ತುಂಡುಗಳನ್ನ ಹಾಕಿ, ಕಡಿಮೆ ಉರಿಯಲ್ಲಿ 15 ನಿಮಿಷಗಳ ಕಾಲ ಕುದಿಸಿ.
* ಇದೆಲ್ಲ ಆದ್ಮೇಲೆ ಕೊನೆಗೆ, ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ ಹಾಕಿದ್ರೆ…. ಬಿಸಿ ಬಿಸಿ ಮ್ಯಾಂಗೋ ಫಿಶ್ ಸೂಪ್ ಸವಿಯಲು ಸಿದ್ಧ.



