ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಮಾಂಗಲ್ಯಂ ತಂತುನಾನೇನ’ ನಟಿ

Public TV
1 Min Read
prajna bhat

ಕಿರುತೆರೆ ಮತ್ತು ಹಿರಿತೆರೆ ನಟ- ನಟಿಯರು ಒಬ್ಬರ ಹಿಂದೆ ಒಬ್ಬರು ಹಸೆಮಣೆ ಏರುವ ಮೂಲಕ ಗುಡ್ ನ್ಯೂಸ್ ಕೊಡ್ತಿದ್ದಾರೆ. ಇದೀಗ ಜನಪ್ರಿಯ ‘ಮಾಂಗಲ್ಯಂ ತಂತುನಾನೇನ’, ಪಾಪ ಪಾಂಡು, ಸೀರಿಯಲ್ ನಟಿ ಪ್ರಜ್ಞಾ ಭಟ್ (Prajna Bhat) ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾವಿ ಪತಿ ಫೋಟೋ ಹಂಚಿಕೊಂಡು ಸಿಹಿಸುದ್ದಿ ನೀಡಿದ್ದಾರೆ.

prajna bhat 1

ಕಿರುತೆರೆ ನಟಿ ಪ್ರಜ್ಞಾ ಭಟ್ ಅವರು ನಾಗಶ್ರಿತ್ ಭಟ್ ಜೊತೆ ಹಸೆಮಣೆ (Wedding) ಏರಲು ರೆಡಿಯಾಗಿದ್ದಾರೆ. ಸ್ನೇಹಿತೆಯರ ಜೊತೆ ಬ್ಯಾಚುರಲ್ ಪಾರ್ಟಿ ಸಖತ್ ಆಗಿ ನಟಿ ಸೆಲೆಬ್ರೇಟ್ ಮಾಡಿದ್ದಾರೆ. ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿರುವ ನಟಿಗೆ ಆಪ್ತರು, ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ದ್ರಾವಿಡ ಪಕ್ಷಗಳು ಕರ್ನಾಟಕ ಅಂದ್ರೆ ಪಾಕಿಸ್ತಾನ ಅಂದ್ಕೊಂಡಿವೆ: ಕಾವೇರಿ ಕುರಿತು ಅನಂತ್ ಕಿಡಿ

prajna bhat 2

2020ರಲ್ಲಿ ‘ಮಾಂಗಲ್ಯಂ ತಂತುನಾನೇನ’ (Mangalyam Tantunanena) ಎಂಬ ಸೀರಿಯಲ್ ಪ್ರಸಾರವಾಗುತ್ತಿತ್ತು. ಹೀರೋ ಆಗಿ ಚಂದನ್ ಅಭಿನಯಿಸುತ್ತಿದ್ದರು. ನಾಯಕಿ ಶ್ರಾವಣಿ ಪಾತ್ರಧಾರಿಯ ತಂಗಿ ರೋಲ್‌ನಲ್ಲಿ ಪ್ರಜ್ಞಾ ಜೀವ ತುಂಬಿದ್ದರು. ತಂಗಿ ಪಾತ್ರವಾಗಿದ್ರು ಪ್ರಜ್ಞಾ ನಟನೆ ಜನಪ್ರಿಯತೆ ಗಳಿಸಿತ್ತು.

prajna bhat

ಪ್ರಜ್ಞಾ ಭಟ್‌ ಅವರು ಮೂಲತಃ ಶೃಂಗೇರಿಯವರಾಗಿದ್ದು, ಮೊದಲ ಆಡಿಷನ್‌ ಅಣ್ಣಾವ್ರ ಸ್ಮಾರಕದ ಮುಂದೆ ಕೊಟ್ಟು ಮೊದಲ ಸೀರಿಯಲ್‌ ‘ಮಾಂಗಲ್ಯಂ ತಂತುನಾನೇನ’ ಸೆಲೆಕ್ಟ್‌ ಆದರು.

ಇತ್ತೀಚೆಗೆ ‘ಒಲವೇ ಮಂದಾರ 2’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಪ್ರಜ್ಞಾ ನಟಿಸಿದ್ದಾರೆ. ಸೆ.22ರಂದು ಸಿನಿಮಾ ತೆರೆ ಕಾಣಲಿದೆ.

Share This Article