ಮಂಗಳೂರು: ಸಿಬಿಎಸ್‌ಸಿ ಬೋರ್ಡ್ ಹಾಗೂ ಬೆಳಗಾವಿಯ ಬಿ.ಬಿ ಹಂಜಿ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (Skating Championship) ಮಂಗಳೂರಿನ (Mangaluru) ಆರ್ನಾ ರಾಜೇಶ್ 2 ಚಿನ್ನದ ಪದಕ ಪಡೆದಿದ್ದಾರೆ.
ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್‌ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 2ನೇ ತರಗತಿಯ ವಿದ್ಯಾರ್ಥಿ ಆರ್ನಾ ರಾಜೇಶ್ 500 ಮೀ. ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ ತಲಾ 2 ಚಿನ್ನದ ಪದಕ ಪಡೆದು ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: ಮಾಸ್ಕ್ ಹಾಕಿದ್ರೆ ಮಾತ್ರ ಮೆಟ್ರೋ ಪ್ರವೇಶಕ್ಕೆ ಅನುಮತಿ
2 ಚಿನ್ನದ ಪದಕ ಪಡೆದ ಆರ್ನಾ ರಾಜೇಶ್ ಜನವರಿಯಲ್ಲಿ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಮಂಗಳೂರಿನ ಕದ್ರಿ ಹಿಲ್ಸ್ ನಿವಾಸಿ ಡಾ. ರಾಜೇಶ್ ಹುಕ್ಕೇರಿ ಹಾಗೂ ಅನಿತಾ ರಾಜೇಶ್ ದಂಪತಿಯ ಪುತ್ರಿಯಾಗಿರುವ ಆರ್ನಾ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)ನ ಸದಸ್ಯೆಯಾಗಿದ್ದಾರೆ. ಇದನ್ನೂ ಓದಿ: ರಂಗಸ್ಥಳದಲ್ಲೇ ಹೃದಯಾಘಾತ – ಕಟೀಲು ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ನಿಧನ