ಮಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟ 185 ಮಂದಿಯಲ್ಲಿ ಮಂಗಳೂರು ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಬೈಕಂಪಾಡಿ ಮೂಲದ ಕುಕ್ಕಾಡಿ ಮನೆತನದ ಅಬ್ದುಲ್ ಖಾದರ್ ಕುಕ್ಕಾಡಿ ಅವರ ಪತ್ನಿ ರಝೀನಾ ಖಾದರ್ ಕುಕ್ಕಾಡಿ(58) ಮೃತ ದುರ್ದೈವಿ. ಕೊಲಂಬೋದಲ್ಲಿ ಅವರ ಬಂಧುಗಳು ನೆಲೆಸಿದ್ದು, ಅವರನ್ನು ಭೇಟಿಯಾಲೆಂದು ಕುಕ್ಕಾಡಿ ದಂಪತಿ ತೆರಳಿದ್ದರು. ಅಲ್ಲಿನ ಶಾಂಗ್ರಿಲಾ ಹೊಟೇಲ್‍ನಲ್ಲಿ ರಝೀನಾ ಇದ್ದರೆ, ಅವರ ಪತಿ ದುಬೈಗೆಂದು ವಿಮಾನದಲ್ಲಿ ಹೊರಟಿದ್ದರು. ಈ ವೇಳೆ ಶಾಂಗ್ರಿಲಾ ಹೊಟೇಲ್‍ನಲ್ಲಿ ನಡೆದ ಸ್ಫೋಟದಲ್ಲಿ ರಝೀನಾ ಮೃತಪಟ್ಟಿದ್ದಾರೆ. ಇದನ್ನೂ ಓದಿ:ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ
Advertisement
Advertisement
ಕುಕ್ಕಾಡಿ ಕುಟುಂಬ ಮೂಲತಃ ಬೈಕಂಪಾಡಿಯವರಾಗಿದ್ದು ದುಬೈನಲ್ಲಿ ನೆಲೆಸಿದ್ದಾರೆ. ಅವರಿಗೆ ಸುರತ್ಕಲ್‍ನಲ್ಲಿ ಮನೆ ಇದೆಯಾದರೂ ಅಲ್ಲಿ ಯಾರೂ ಇಲ್ಲ. ಆದ್ದರಿಂದ ವರ್ಷಕ್ಕೊಮ್ಮೆ ಕೊಲಂಬೋಗೆ ಈ ದಂಪತಿ ಬಂದು ಹೋಗುತ್ತಿದ್ದರು. ಆದ್ರೆ ಇಂದು ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ರಝೀನಾ ಖಾದರ್ ಬಲಿಯಾಗಿದ್ದಾರೆ. ಇದನ್ನೂ ಓದಿ:ಸೀರಿಯಲ್ ಬ್ಲಾಸ್ಟ್ – ಕೂದಲೆಳೆ ಅಂತರದಲ್ಲಿ ಪಾರಾದ ಕನ್ನಡಿಗನ ಕರಾಳ ಅನುಭವ
Advertisement
ಶಾಂಗ್ರಿಲಾ ಹೋಟೆಲ್ ನಲ್ಲಿ ಆತ್ಮಹುತಿ ದಾಳಿಕೋರ ಝಾರನ್ ಹಶೀಂ, ಬ್ಯಾಟಿಕೊಲೊ ಚರ್ಚ್ ಮೇಲೆ ಅನು ಮೊಹಮ್ಮದ್ ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈವರೆಗೇ ಕೊಲಂಬೋದ 8 ಕಡೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಬೆಳಗ್ಗೆ 6 ಕಡೆಯಲ್ಲಿ ಸ್ಫೋಟ ಸಂಭವಿಸಿದರೆ, ಮಧ್ಯಾಹ್ನ 3 ಕಡೆಯಲ್ಲಿ ಆತ್ಮಹುತಿ ದಾಳಿ ನಡೆದಿದೆ.
Advertisement
ಎಲ್ಲೆಲ್ಲಿ ದಾಳಿ?
1. ಸೇಂಟ್ ಅಂತೋನಿಯ ಶ್ರೈನ್, ಕೊಚ್ಚಿಕಡೆ
2. ಸೇಂಟ್ ಸೆಬಾಸ್ಟಿಯನ್ ಚರ್ಚ್, ನೀಗ್ರೋ
3. ಜಿಯಾನ್ ಚರ್ಚ್, ಬ್ಯಾಟಿಕೊಲೊ
4. ಸಿನ್ನಮೋನ್ ಗ್ರ್ಯಾಂಡ್, ಕೊಲಂಬೊ
5. ಕೊಲಂಬೊದ ಶಾಂಗ್ರಿ-ಲಾ ಹೋಟೆಲ್
6. ಕಿಂಗ್ಸ್ಬರಿ ಹೋಟೆಲ್, ಕೊಲಂಬೊ
7. ದೆಹಿವಾಲಾ -ಮೌಂಟ್ ಲವಿನಿಯಾದಲ್ಲಿನ ದೆಹಿವಾಲಾ ಝೂ
8. ಮಹವಿಲಾ ಗಾರ್ಡನ್ಸ್, ಡೆಮಟಗೋಡಾ
ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಕೊಚ್ಚಿಕೇಡ್‍ನ ಸೆಂಟ್ ಅಂಟೋನಿ ಚರ್ಚ್, ನೆಗೊಂಬೆ ಚರ್ಚ್ ನಲ್ಲಿ, ಶಾಂಗ್ರಿ-ಲಾ ಹಾಗೂ ಸಿನಾಮೊನ್ ಗ್ರ್ಯಾಂಡ್ ಹೋಟೆಲ್‍ಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ. ಇದನ್ನೂ ಓದಿ:ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಕ್ಕೆ 160 ಬಲಿ – 10 ದಿನದ ಮೊದಲೇ ಸಿಕ್ಕಿತ್ತು ಸುಳಿವು
ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್‍ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿದೆ. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿದೆ. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತ್ತಿದೆ. ಈ ನಡುವೆ ಗಾಯಳುಗಳ ನರಳಾಟ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂಧನ ಮುಗಿಲು ಮುಟ್ಟಿದೆ.
https://www.youtube.com/watch?v=S6cNQz5DtY0
https://www.youtube.com/watch?v=oF1gWggqmbw