ಮಂಗಳೂರು: ಪ್ರಧಾನಿ ಮೋದಿ ಅವರ ಸ್ಕೀಮ್‍ನಡಿ ಮನೆ ಮಾಡಿಕೊಡ್ತೀನಿ ಎಂದು ಮಂಗಳೂರಿನ ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾಳೆ.
ಗೀತಾ ಶೆಣೈ ಎಂಬಾಕೆ ಪ್ರತಿಯೊಬ್ಬರಿಂದ 30 ಸಾವಿರ ರೂ. ಪಡೆದುಕೊಂಡು ಸುಮಾರು ಐನೂರಕ್ಕೂ ಹೆಚ್ಚು ಜನರಿಗೆ ಪಂಗನಾಮ ಹಾಕಿದ್ದಾಳೆ. ಈ ವಂಚಕಿಯ ಮೋಸದಾಟಕ್ಕೆ ಗಂಡನೂ ಸಹ ಸಾಥ್ ನೀಡಿದ್ದಾನೆ.
ಸದ್ಯ ಮೋಸ ಹೋದವರೆಲ್ಲರೂ ಈಕೆಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಈಕೆ ಯಾವ ಅಂಜಿಕೆಯೂ ಇಲ್ಲದೆ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದಳು. ಪೊಲೀಸರ ಎದುರೇ ಹಣ ಕೊಡಲ್ಲ ಅಂತಾ ಅವಾಜ್ ಹಾಕಿದ್ದಳು.
ಸದ್ಯ ಬಂದರು ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.