-ಖಾಸಗಿ ಲಾಬಿಗೆ ಮಣಿದು ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ತಣ್ಣೀರು!
ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಮಕ್ಕಳಿಗೆ ಪ್ಯಾರಾ ಮೆಡಿಕಲ್ ಕೋರ್ಸ್ ಸಿಗುವಂತಾಗಬೇಕೆಂದು ಸಿದ್ದರಾಮಯ್ಯ ಸರ್ಕಾರ ಯೋಜನೆ ಜಾರಿಗೆ ತಂದಿತ್ತು. ಕೌನ್ಸಿಲಿಂಗ್ ನಡೆಸಿ, ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ತಾಂತ್ರಿಕ ಶಿಕ್ಷಣವನ್ನು ಆರಂಭಿಸಲಾಗಿತ್ತು. ಆದರೆ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದಾಗ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಪ್ಯಾರಾ ಮೆಡಿಕಲ್ ಕೋರ್ಸ್ ಜಾರಿಗೆ ತರಲಾಗಿತ್ತು. ಪ್ಯಾರಾ ಮೆಡಿಕಲ್ ಬೋರ್ಡ್ ಸ್ಥಾಪಿಸಿ, ಖಾಸಗಿ ಕಾಲೇಜುಗಳ ಲಾಬಿಯ ನಡುವೆ ಬಡ ಮಕ್ಕಳಿಗೂ ಮೆಡಿಕಲ್ ಶಿಕ್ಷಣ ದೊರಕಿಸೋ ಯತ್ನ ನಡೆದಿತ್ತು. ಮಂಗಳೂರಿನಲ್ಲಿ ಮೊದಲ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ತರಗತಿ ಇನ್ನಿತರ ಮೂಲ ಸೌಕರ್ಯ ಇಲ್ಲವೆಂಬ ನೆಪ ಹೇಳಿ ಖಾಸಗಿ ಆಸ್ಪತ್ರೆ ಮಂಗಳಾ ಪ್ಯಾರಾ ಮೆಡಿಕಲ್ ಕಾಲೇಜಿಗೆ ಹೊರ ಗುತ್ತಿಗೆ ನೀಡಲಾಗಿತ್ತು. ಮಂಗಳಾ ಕಾಲೇಜಿನವರು 2ನೇ ವರ್ಷಕ್ಕೆ ಸೇರಿಸಿಕೊಂಡಿಲ್ಲ. ಹೀಗಾಗಿ ಮೊದಲ ವರ್ಷ ಪೂರೈಸಿದ ಲ್ಯಾಬ್, ಎಕ್ಸ್ ರೇ ಸೇರಿದಂತೆ ಏಳು ವಿಭಾಗಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗತಿ ಕಾಣದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಬಾಗಿಲು ಕಾಯುವಂತಾಗಿದೆ.
Advertisement
Advertisement
ಮೊದಲ ವರ್ಷದಲ್ಲಿ ಬಳ್ಳಾರಿ, ಶಿವಮೊಗ್ಗ, ಮಡಿಕೇರಿಯಿಂದ ಮಂಗಳೂರಿಗೆ 67 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ರೂ ಅತ್ತ ಥಿಯರಿಯೂ ಇಲ್ಲದೇ ಇತ್ತ ಪ್ರಾಕ್ಟಿಕಲ್ ಇಲ್ಲದೇ ಡೋಲಾಯಮಾನ ಆಗಿದೆ. ಇತರೇ ಖಾಸಗಿ ಕಾಲೇಜುಗಳಲ್ಲಿ 3 ತಿಂಗಳ ತರಗತಿ ನಡೆದು ನವೆಂಬರ್ ನಲ್ಲಿ ಪ್ಯಾರಾ ಮೆಡಿಕಲ್ ಪರೀಕ್ಷೆ ಎದುರಿಸುತ್ತಿದ್ದಾರೆ.
Advertisement
ಪ್ಯಾರಾ ಮೆಡಿಕಲ್ ಕೋರ್ಸ್ ನಡೆಸಲು 8 ಎಕರೆ ವ್ಯಾಪ್ತಿಯುಳ್ಳ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಜಾಗ ಇಲ್ಲ ಅನ್ನೋದೇ ಅಚ್ಚರಿಯ ಸಂಗತಿ. ಖಾಸಗಿ ಕಾಲೇಜುಗಳ ಲಾಬಿಗೆ ಮಣಿದು ಡಿಎಂಓ ಹೀಗೆ ವರ್ತಿಸುತ್ತಿದ್ದಾರೆಯೇ ಅನ್ನೋ ಪ್ರಶ್ನೆ ಎದ್ದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv