ಮಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬರೆದ ಸೈನಿಕರನ್ನು ಅವಹೇಳನ ಮಾಡುವಂತಹ ಯುದ್ಧ ಒಂದು ಉದ್ಯಮ ಎಂಬ ಗದ್ಯವನ್ನು ಕೊನೆಗೂ ಹಿಂಪಡೆಯಲು ಮಂಗಳೂರು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಈ ವರ್ಷದ ಶೈಕ್ಷಣಿಕ ವರ್ಷದ ಬಿಸಿಎ ಪದವಿಯ ಮೊಲದ ಸೆಮಿಸ್ಟರ್ ಕನ್ನಡ ಭಾಷಾ ಪುಸ್ತಕದಲ್ಲಿ `ಯುದ್ಧ ಒಂದು ಉದ್ಯಮ’ ಅನ್ನುವ ಬರಗೂರು ರಾಮಚಂದ್ರಪ್ಪನವರ ಗದ್ಯದಲ್ಲಿ ಸೈನಿಕರು ಅತ್ಯಾಚಾರಿಗಳು, ಅವರು ಗಡಿಭಾಗದಲ್ಲಿ ಯುದ್ಧದ ಸಂದರ್ಭ ಅತ್ಯಾಚಾರ ಮಾಡುತ್ತಾರೆ ಎಂದು ವಿವಾದಾತ್ಮಕವಾಗಿ ಬಿಂಬಿಸಲಾಗಿತ್ತು. ಇದು ಭಾರೀ ವಿವಾದಕ್ಕೀಡಾಗಿದ್ದರಿಂದ ಇದೀಗ ಮಂಗಳೂರು ವಿವಿ ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿ ಸಭೆ ನಡೆಸಿದ್ದು, ಈ ಪಾಠವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆ.
Advertisement
ಇದನ್ನೂ ಓದಿ: ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ
Advertisement
ಬರಗೂರು ಅವರ ಈ ಲೇಖನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದನ್ನು ಅಳೆದು ತೂಗಿ ಪಠ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಈ ವರ್ಷ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಲಾಗಿತ್ತು. ಆಗ ವಿದ್ಯಾರ್ಥಿಗಳಿಂದಾಗಲಿ, ಶಿಕ್ಷಕರಿಂದಾಗಲಿ ವಿರೋಧ ವ್ಯಕ್ತವಾಗಿಲ್ಲ. ಇದೀಗ ಸೈನಿಕರಿಗೆ ಅವಮಾನವಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ಬಳಿಕ ಚರ್ಚೆಯಾಗಿ ಸೈನಿಕರ ಭಾವನೆಗಳಿಗೆ ಗೌರವಕೊಟ್ಟು ಪಠ್ಯವನ್ನು ಹಿಂಪಡೆಯಲಾಗಿದೆ.
Advertisement
ಈ ಪಠ್ಯದಿಂದ ಮುಂದಿನ ಪರೀಕ್ಷೆಗೆ ಯಾವುದೇ ಪ್ರಶ್ನೆಗಳು ಬರೋದಿಲ್ಲ, ಮಾತ್ರವಲ್ಲ ಮುಂದಿನ ವರ್ಷದಿಂದ ಮುದ್ರಣ ಮಾಡಲಾಗುವುದಿಲ್ಲ ಎಂದು ಪಠ್ಯ ಪುಸ್ತಕ ಮುದ್ರಣ ಸಮಿತಿ ಸ್ಪಷ್ಟಪಡಿಸಿದೆ.